ಕರಾವಳಿಬೆಂಗಳೂರುರಾಜಕೀಯ

ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರಿಂದ ಸಭ್ಯತೆ ಮೀರುವ ಯತ್ನ ಖಂಡನೀಯ-ವಿ.ಸುನೀಲ್ ಕುಮಾರ್

303

ನ್ಯೂಸ್ ನಾಟೌಟ್ : ಚುನಾವಣಾ ಕಾವು ರಂಗೇರುತ್ತಿದ್ದು,ರಾಜಕೀಯ ಪಕ್ಷಗಳು ಬಿರುಸಿನಿಂದ ಮತಪ್ರಚಾರದಲ್ಲಿ ತೊಡಗಿವೆ.ಈ ಹಿನ್ನಲೆಯಲ್ಲಿ ಇದೀಗ ರಾಜಕೀಯದಲ್ಲಿ ಪರಸ್ಪರ ಪೈಪೋಟಿ ಶುರುವಾಗಿದ್ದು,ನಾಮುಂದು ತಾಮುಂದು ಅಂದುಕೊಂಡು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ.

ಅಂತೆಯೇ ಕಾರ್ಕಳದಲ್ಲಿಯೂ ಚುನಾವಣಾ ಪ್ರಚಾರ ಕೆಲಸಗಳು ಭರದಿಂದ ನಡೆಯುತ್ತಿದ್ದು,ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಹೀಗೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಮತಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಿರುವ ಬೆಂಬಲಿಗರು ಸಾರ್ವಜನಿಕ ಸಭೆ , ವೇದಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವುದು, ಕೀಳು ಮಟ್ಟ ಪದ ಪ್ರಯೋಗಿಸುತ್ತಿರುವುದನ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು ಆರೋಪಿಸಿದ್ದಾರೆ.ಅವರ ನಡವಳಿಕೆಗಳು ಅನಾಗರಿಕ ಸಂಸ್ಕೃತಿಯಾಗಿದೆ. ಇಂತಹ ಸಭ್ಯತೆ ಮೀರಿದ ವರ್ತನೆ ಕಾರ್ಕಳದ ಗೌರವ ಕೆಡಿಸುವ ಯತ್ನವಾಗಿದೆ ಎಂದು ಹೇಳಿದ್ದಾರೆ.

See also  ಮೂಲ್ಕಿ: ತಾಯಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಪಾಪಿ ಪುತ್ರ, ಆಕೆ ವಿರೋಧಿಸಿದಾಗ ಕತ್ತು ಹಿಸುಕಿ ಕೊಂದೇ ಬಿಟ್ಟ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget