Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಸ್ತ್ರೀಯರನ್ನು ಪ್ರಜ್ಞೆ ತಪ್ಪಿಸಿ ಬೆತ್ತಲುಗೊಳಿಸಿ ತಾಂತ್ರಿಕ ಪೂಜೆಗಳಿಗೆ ಬಳಸುತ್ತಿದ್ದ 14 ಮಂದಿ ಅರೆಸ್ಟ್..! ಸುಲಭವಾಗಿ ಹಣಗಳಿಕೆಯ ಆಸೆ ಹೊಂದಿದ್ದವರೇ ಇವರ ಟಾರ್ಗೆಟ್..!

913

ನ್ಯೂಸ್‌ ನಾಟೌಟ್: ಹಣ ಗಳಿಸುವ ಆಸೆ ತೋರಿಸಿ ಮಹಿಳೆಯರನ್ನು ಪ್ರಜ್ಞೆ ತಪ್ಪಿಸಿ ಬೆತ್ತಲೆಗೊಳಿಸಿ ತಾಂತ್ರಿಕ ಪೂಜೆ ಮಾಡುತ್ತಿದ್ದ ಘಟನೆ ಉತ್ತರಪ್ರದೇಶದ ಸಂಭಲ್‌ ನಲ್ಲಿ ನಡೆ­ದಿದೆ.

ಇದಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ಬಂಧಿ­ಸಿದ್ದು, ತನಿಖೆ ಆರಂಭಿಸಿದ್ದಾರೆ.

ಸುಲಭವಾಗಿ ಹಣ ಮಾಡುವ ಉದ್ದೇಶ ಹೊಂದಿರುವವರನ್ನು ಗುರಿ­ಯಾಗಿ­ಸಿ­ಕೊಂಡು ಗ್ಯಾಂಗ್‌ ವೊಂದು ಈ ತಾಂತ್ರಿಕ ಪೂಜೆಯನ್ನು ಮಾಡುತ್ತಿದ್ದು, ಅಪಹರಿಸಿ ಹಣ ವಸೂಲಿ ಮಾಡುತ್ತಿದ್ದರು. ಆದರೆ ಈ ಪೂಜೆಯ ನೆಪದಲ್ಲಿ 19ರಿಂದ 24 ವರ್ಷದ ಮಹಿಳೆಯರು ಮತ್ತು ಪುರುಷ ರನ್ನು ಅಪಹರಿಸಿ, ಅವರ ಜ್ಞಾನ ತಪ್ಪಿಸಿ ಬೆತ್ತಲೆಗೊಳಿಸಿ ಅವರ ಮೇಲೆ ಹಣವನ್ನು ಸುರಿಯುತ್ತಿದ್ದರು ಎಂಬುದು ತಿಳಿದು­ಬಂದಿದೆ. ಅಲ್ಲದೆ, ಮಹಿಳೆಯರ ವಿವಿಧ ಭಂಗಿಯ ಪೋಟೋಗಳನ್ನು ತೆಗೆಯಲಾ­ಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬಂಧನಕ್ಕೊಳಪಟ್ಟಿರುವವರ ಮೊಬೈಲ್‌ ಗ‌ಳಲ್ಲಿ ಹಲವು ವಿಡಿಯೋಗಳು ಪತ್ತೆಯಾಗಿದ್ದು, ಪೂಜೆ ಮಾಡುವ ತಾಂತ್ರಿಕರು ಮಹಿಳೆಯರನ್ನು ಲೈಂಗಿಕ­ವಾಗಿ ಶೋಷಣೆ ಮಾಡಿರುವ ವಿಡಿಯೋ­ಗಳು ಇವೆ. ಇವುಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಂಭಲ್‌ ನ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿ­ಕಾರಿ ಅನುಕೃತಿ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ ಇಬ್ಬರು ಅರೆಸ್ಟ್..! ಕಳ್ಳರು ಬೀಗ ಒಡೆಯುತ್ತಿರುವಾಗ ಮೊಳಗಿದ ಸೈರನ್..!

ಉಚ್ಚಾಟನೆ ನಿರ್ಧಾರ ಮರುಪರಿಶೀಲನೆ ಮಾಡಲು ಒತ್ತಾಯವನ್ನೂ ಮಾಡುವುದಿಲ್ಲ ಎಂದ ಯತ್ನಾಳ್..! ನನ್ನ ಉಚ್ಛಾಟನೆಗೆ ಕಾರಣಕರ್ತರಾದವರು ನಾಶವಾಗುತ್ತಾರೆ ಎಂದ ಉಚ್ಚಾಟಿತ ಶಾಸಕ..!

See also  ಮಹಿಳೆಯನ್ನು ಹತ್ಯೆ ಮಾಡಿದ್ದ ತಾಯಿ, ಮಗಳು ಮತ್ತು ಅಪ್ರಾಪ್ತ ಪುತ್ರನ ಬಂಧನ..! 15 ಸಾವಿರ ಸಾಲಕ್ಕೆ ನಡೆದ ಗಲಾಟೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget