ಕ್ರೈಂವೈರಲ್ ನ್ಯೂಸ್

ಆತನ ಉಪದ್ರ ತಡೆಯಲಾರದೆ ಸಿಎಂ ಯೋಗಿ ಆದಿತ್ಯನಾಥ್ ಗೆ ರಕ್ತದಲ್ಲೇ ಪತ್ರ ಬರೆದ ವಿದ್ಯಾರ್ಥಿನಿಯರು..! ಪ್ರಾಂಶುಪಾಲ ಆಡಿದ್ದ ಆ ಪೋಲಿಯಾಟವೇನು..?

288

ನ್ಯೂಸ್ ನಾಟೌಟ್: ಆ ಪ್ರಾಂಶುಪಾಲನದ್ದು ಪ್ರತಿ ದಿನ ಉಪದ್ರ. ಪೋಲಿಯಾಟದ ಕಿರಿಕ್. ಇದರಿಂದ ನೊಂದ ವಿದ್ಯಾರ್ಥಿನಿಯರು ತಮ್ಮ ರಕ್ತವನ್ನು ಸುರಿಸಿಕೊಂಡು ಅದರಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ. ಪೋಲಿಯಾಟವಾಡಲು ಕರೆಯುವ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಆ ದುಷ್ಟ ಪ್ರಾಂಶುಪಾಲನನ್ನು ಬಂಧಿಸಲಾಗಿದೆ.

ಪ್ರಾಂಶುಪಾಲರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನಾವು ನಿಮ್ಮೊಂದಿಗೆ ಈ ವಿಷಯದ ಕುರಿತು ಚರ್ಚಿಸಬೇಕಿದೆ. ನಿಮ್ಮನ್ನು ಭೇಟಿಯಾಗಲು ನಮ್ಮ ಪೋಷಕರಿಗೆ ಅವಕಾಶ ಮಾಡಿ. ನಮ್ಮನ್ನು ನಿಮ್ಮ ಮಕ್ಕಳು ಎಂದು ಭಾವಿಸಿ ನ್ಯಾಯ ದೊರಕಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಶಾಲೆಯೊಂದರ ಪ್ರಾಂಶುಪಾಲರು ಈಗ ಪೋಲಿಯಾಟದ ಕೇಸ್ ನಲ್ಲಿ ಕಂಬಿ ಎಣಿಸುವಂರಾಗಿದೆ. ಪೊಲೀಸರಿಂದ ಅರೆಸ್ಟ್​ ಆದ ಆರೋಪಿಯನ್ನು ಡಾ. ರಾಜೀವ್​ ಪಾಂಡೆ ಎಂದು ಗುರುತಿಸಲಾಗಿದೆ.

ಅಪ್ರಾಪ್ತ ಬಾಲಕಿಯರನ್ನು ತನ್ನ ಕೊಠಡಿಗೆ ಕರೆಸಿಕೊಂಡ ಆರೋಪಿ ಪ್ರಾಂಶುಪಾಲ ಅನುಚಿತ ವರ್ತನೆ ತೋರಿದ್ದಾರೆ. 12-15 ವರ್ಷದ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಪೋಲಿಯಾಟದ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಪೋಷಕರು ಪ್ರಶ್ನಿಸಲು ಹೋದಾಗ ಎಸ್ಕೇಪ್​ ಆಗಿದ್ದಾನೆ. ಬಳಿಕ ತನ್ನ ವಿರುದ್ಧ ಕೇಸ್​ ಮಾಡಿದ್ದ ಸಂತ್ರಸ್ತ ಬಾಲಕಿಯರ ಪೋಷಕರ ಮೇಲೆಯೇ ಪೊಲೀಸ್​​ ಕೇಸ್​ ಮಾಡಿದ್ದಾರೆ. ಈ ಮುನ್ನ ಪೋಷಕರು ಆರೋಪಿ ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಕೇಸ್​ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

See also  ರೀಲ್ಸ್‌ ನಲ್ಲಿ ವೈರಲ್ ಆಗಬೇಕೆಂದು ತುಂಡು ಬಟ್ಟೆ ತೊಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ ಯುವತಿ..! ಜನಾಕ್ರೋಶದ ಬಳಿಕ ಕ್ಷಮೆ ಯಾಚನೆ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget