Latestಕ್ರೈಂರಾಜ್ಯ

KSRTC ಬಸ್‌ ಗಳ ನಡುವೆ ಮುಖಾ-ಮುಖಿ ಡಿಕ್ಕಿ..! 35ಕ್ಕೂ ಹೆಚ್ಚು ಮಂದಿಗೆ ಗಾಯ, 12 ಮಂದಿ ಗಂಭೀರ..!

651
Pc Cr: Vartha bharati

ನ್ಯೂಸ್ ನಾಟೌಟ್: KSRTC ಬಸ್ ಗಳ ನಡುವೆ ಮುಖಾ-ಮುಖಿ ಢಿಕ್ಕಿಯಾದ ಪರಿಣಾಮ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು(ಮೇ.20) ಮೈಸೂರಿನ ನಂಜನಗೂಡಿನ ಗೋಳೂರು ಗ್ರಾಮದ ಬಳಿ ನಡೆದಿದೆ.

ನಂಜನಗೂಡು-ಚಾಮರಾಜನಗರ ರಸ್ತೆಯ ಗೋಳೂರು ಗ್ರಾಮದ ಬಳಿಯ ವಿದ್ಯಾಪೀಠದ ಮುಂಭಾಗ ಮಂಗಳವಾರ ಎರಡು ಬಸ್ ಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡು ಬಸ್ ನ ಚಾಲಕರು ಸೇರಿದಂತೆ 35ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 12 ಜನರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಮತ್ತು ಚಾಮರಾಜನಗರದಿಂದ ನಂಜನಗೂಡು ಕಡೆಗೆ ಬರುತ್ತಿದ್ದ ಬಸ್ ಗಳ ನಡುವೆ ಢಿಕ್ಕಿ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ರವೀಂದ್ರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.  

25 ವರ್ಷಗಳಿಂದ ದರ್ಶನ್ ಮೇಕಪ್ ಆರ್ಟಿಸ್ಟ್ ಆಗಿದ್ದ ಹೊನ್ನೆಗೌಡ ನಿಧನ..! ಭಾವುಕ ಪೋಸ್ಟ್ ಹಂಚಿಕೊಂಡ ದಾಸ..!

See also  ಮಡಿಕೇರಿ: ಸಿದ್ದು, ಡಿಕೆಶಿಯನ್ನ ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಿ ಎಂದದ್ದೇಕೆ ಪ್ರತಾಪ್‌ ಸಿಂಹ? 21 ಆರೋಪಿಗಳನ್ನು ಬಂಧಿಸಿದ್ದೇಕೆ ಪೊಲೀಸರು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget