ಕರಾವಳಿಕ್ರೈಂವೈರಲ್ ನ್ಯೂಸ್

ಮೂಡುಬಿದಿರೆ: ವಿದ್ಯಾರ್ಥಿನಿ ನಿಗೂಢ ನಾಪತ್ತೆ..! ಕಾಲೇಜು ಬಸ್ ನಲ್ಲಿ ಬಂದ 19 ರ ಯುವತಿ ಹೋದದ್ದೆಲ್ಲಿಗೆ..?

ನ್ಯೂಸ್ ನಾಟೌಟ್: ಪ್ರತಿಷ್ಠಿತ ಕಾಲೇಜೊಂದರ ಪ್ರಥಮ ವರ್ಷದ ಬಿಪಿಟಿ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರ (19) ಕಾಣೆಯಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ(ಫೆ.23) ಬೆಳಗ್ಗೆ ಸಹಪಾಠಿಗಳ ಜತೆ ಸ್ವರಾಜ್ಯ ಮೈದಾನದಲ್ಲಿರುವ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದು ಕನ್ನಡ ಭವನದ ಬಳಿ ಇಳಿದಿರುವ ಮಾಹಿತಿ ಲಭಿಸಿದೆ.

ಆ ಬಳಿಕ ಅಲ್ಲಿಂದ ಕಾಲೇಜಿಗೆ ಹೋಗದೆ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾಣೆಯಾಗುವ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Related posts

ಶಬರಿಮಲೆ ಅರಾವಣಂ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆ :ವಿತರಣೆ ಮಾಡದಂತೆ ಹೈಕೋರ್ಟ್ ಆದೇಶ

ಪುತ್ತೂರಿನಲ್ಲಿಯೂ ಸಿಗಲಿದೆ ನ್ಯೂ ಚೆನ್ನೈ ಶಾಪಿಂಗ್ , ಮನಕ್ಕೊಪ್ಪುವ ಬಟ್ಟೆಗಳನ್ನು ಅಗ್ಗದ ದರಕ್ಕೆ ಪಡೆಯಿರಿ

ಭಾರಿ ಭೂಕಂಪ ಆಗುವುದು: ಕೋಡಿಮಠದ ಸ್ವಾಮೀಜಿ ಭವಿಷ್ಯ