ಕರಾವಳಿಕ್ರೈಂರಾಜ್ಯ

ʼಜೈ ಶ್ರೀರಾಮ್ʼ ಗೀತೆ ಹಾಕಿ ನೃತ್ಯ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 24 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ನ್ಯೂಸ್‌ ನಾಟೌಟ್: ʼಜೈಶ್ರೀರಾಮʼ ಗೀತೆ ಹಾಕಿ ನೃತ್ಯ ಮಾಡುವ ವೇಳೆ ಎರಡು ಕೋಮಿನ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದ್ದು, ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ 25 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಈ ಘಟನೆ ಬೀದರ್ ನ ಗುರುನಾನಕ ದೇವ ಇಂಜಿಯರಿಂಗ್‌ ಕಾಲೇಜಿನಲ್ಲಿ ನಡೆದಿದೆ ಬುಧವಾರ(ಮೇ.೨೯) ಮಧ್ಯಾಹ್ನ ಗುರುನಾನಕ ದೇವ ಇಂಜಿಯರಿಂಗ್‌ ಕಾಲೇಜಿನಲ್ಲಿ ಮೇ 30,31 ರಂದು ಎರಡು ದಿನಗಳ ಕಾಲ ನಡೆಯುವ ತಾಂತ್ರಿಕ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಪೂರ್ವಭಾವಿ ತಯಾರಿ ನಡೆಯುತ್ತಿತ್ತು. ಈ ವೇಳೆ ಕೇಲವು ವಿದ್ಯಾರ್ಥಿಗಳು ʼಜೈಶ್ರೀರಾಮʼ ಹಾಡು ಹಾಕಿ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಮುಸ್ಲಿಂ ವಿದ್ಯಾರ್ಥಿಗಳು ಅಡ್ಡಿ ಪಡಿಸಿದರು ಎನ್ನಲಾಗಿದೆ. ಈ ವೇಳೆ ಎರಡು ಕೋಮಿನ ವಿದ್ಯಾರ್ಥಿಗಳ ನಡುವೆ ವಾಗ್ವಾದ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಗಾಂಧಿಗಂಜ್ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Click 👇

https://newsnotout.com/2024/05/panjurli-kannada-news-v-udupi
https://newsnotout.com/2024/05/prajwal-revanna-and-airport-kannada-news

Related posts

ಭಾರತದ ಹಿಂದೂ ಯುವತಿಯೊಂದಿಗೆ ಪಾಕ್​ ಕ್ರಿಕೆಟಿಗನ ಎಂಗೇಜ್ಮೆಂಟ್..! ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲಿದ್ದಾರಾ ಪೂಜಾ..?

ಶೀಘ್ರದಲ್ಲೇ ಬೀಡಿ, ಸಿಗರೇಟ್‌ ನಿಷೇಧ..!

ಮಹಾಕಾಳಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡ ಅರ್ಚಕ..! ಆತನ ಪತ್ನಿಯ ಚೀರಾಟ ಕೇಳಿ ಓಡೋಡಿ ಬಂದ ಜನ..!