ಕ್ರೈಂವೈರಲ್ ನ್ಯೂಸ್

ತೆಂಗಿನ ಮರದಲ್ಲಿ ಬೆಂಕಿ ಜ್ವಾಲೆ..! ಹೊತ್ತಿ ಉರಿದ ತೆಂಗಿನ ಮರಗಳು..!

225

ನ್ಯೂಸ್ ನಾಟೌಟ್: ಜಮೀನಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ತೆಂಗಿನಕಾಯಿ, ತೇಗದ ಮರಗಳು, ತೆಂಗಿನ‌ಮರಗಳು ಸುಟ್ಟು ಕರಕಲಾದ ಘಟನೆ ಚಾಮರಾಜನಗರದ ತಾಲೂಕಿನ ಆಲೂರುಹೊಮ್ಮ ಗ್ರಾಮದಲ್ಲಿ ಶನಿವಾರ (ಮಾರ್ಚ್‌ 02) ಮಧ್ಯಾಹ್ನ 2ಕ್ಕೆ ನಡೆದಿದೆ.

ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ಎಚ್ಎಸ್ ಮಲ್ಲಣ್ಣ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿದ್ದ ತೆಂಗಿನಕಾಯಿ ರಾಶಿಗೆ ಬೆಂಕಿ ಬಿದ್ದು, ಬಳಿಕ ಜಮೀನಿನಲ್ಲಿದ್ದ ತೇಗದ ಮರಗಳು ತೆಂಗಿನ ಮರಗಳಿಗೂ ಬೆಂಕಿ ತಗುಲಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇನ್ನು ತೆಂಗಿನ ಮರಗಳ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

See also  ಆಕಸ್ಮಿಕವಾಗಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್..! ಹಿಂದಿರುಗಿಸಲು ನಿರಾಕರಿಸಿದರೇ ದೇವಸ್ಥಾನದ ಸಿಬ್ಬಂದಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget