ಕರಾವಳಿ

ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಎಳನೀರು ತಲೆ ಮೇಲೆ ಬಿದ್ದು ವ್ಯಕ್ತಿ ಮೃತ್ಯು

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ತೆಂಗಿನಕಾಯಿ ಕೀಳುತ್ತಿದ್ದ ವೇಳೆ, ತಲೆ ಮೇಲೆ ಎಳನೀರು ಬಿದ್ದು ಸಾವನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.ಕರಂಬಾರು, ಕಾಪಿನಡ್ಕ ನಿವಾಸಿ ಸತೀಶ್ ರಾವ್‌ (58) ಮೃತ ದುರ್ದೈವಿ.

ಏನಿದು ಘಟನೆ?

ಪ್ರಗತಿಪರ ಕೃಷಿಕರಾಗಿರುವ ಸತೀಶ್ ರಾವ್‌ (58) ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದರು. ಈ ವೇಳೆ ತಲೆಗೆ ಎಳನೀರು ಬಿದ್ದು ತಲೆಗೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಸತೀಶ್ ರಾವ್ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದವರು. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಪುತ್ರರನ್ನು ಗಲಿದ್ದಾರೆ.

Related posts

ರಾಜ್ಯ ಮಟ್ಟದ ಯೋಗ: ಗಮನ ಸೆಳೆದ ಅಮರ ಯೋಗ ಗುತ್ತಿಗಾರು ಕೇಂದ್ರದ ವಿದ್ಯಾರ್ಥಿಗಳು

‘ಮಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ನಮ್ಮನ್ನು ನೆನಪೇ ಆಗಲಿಲ್ಲ.. ತೊಂದರೆ ಇಲ್ಲ, ದೇವರು ನೋಡಿಕೊಳ್ಳುತ್ತಾರೆ’, ಉದಯ ಪೂಜಾರಿ ತೀವ್ರ ಅಸಮಾಧಾನ

ಪುತ್ತೂರು: ನನ್ನ ಕ್ಷೇತ್ರದಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ,ಬೆಳ್ತಂಗಡಿ ಶಾಸಕರು ಇಲ್ಲಿಗೆ ಬಂದು ಮಾತನಾಡುವ ಅಗತ್ಯವಿಲ್ಲ-ಶಾಸಕ ಅಶೋಕ್ ರೈ