ಕರಾವಳಿಕ್ರೈಂ

ಸುಳ್ಯ: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾನರ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನ್ಯೂಸ್ ನಾಟೌಟ್: ಕರ್ನಾಟಕದ ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಶನಿವಾರವಷ್ಟೇ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಕಿಡಿಗೇಡಿಗಳು ಸಿದ್ದರಾಮಯ್ಯ ಬ್ಯಾನರ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಗುತ್ತಿಗಾರಿನ ವಳಲಂಬೆ ಎಂಬಲ್ಲಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ವಳಲಂಬೆ ಬಸ್ ನಿಲ್ದಾಣದಲ್ಲಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದ ಬ್ಯಾನರ್ ಅನ್ನು ಹಾಕಲಾಗಿತ್ತು. ಕಾಂಗ್ರೆಸ್ ಅಭಿಮಾನಿ ಬಳಗದಿಂದ ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಕಿಡಿಗೇಡಿಗಳು ಇದಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಪುತ್ತೂರು: ಶಾಸಕರೊಂದಿಗಿರುವ ಮಹಿಳೆಯ ಫೋಟೋ ವೈರಲ್,ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ

‘ಡಬಲ್ ಮರ್ಡರ್’ ಕೇಸಿನ ಆರೋಪದಲ್ಲಿ ಸಿಲುಕಿಕೊಂಡಿದ್ದ ಬಜರಂಗದಳ ಕಾರ್ಯಕರ್ತನ ಬಂಧನ..! ಗೋರಕ್ಷಕನ ಬಂಧನದ ಹಿಂದಿರುವ ಪ್ರಕರಣಗಳು ಯಾವುದು..?

ಸಂಸತ್​​ನಲ್ಲಿ ಮಹಿಳಾ ಸದಸ್ಯರಿಗೆ ‘ಫ್ಲೈಯಿಂಗ್ ಕಿಸ್’ ಕೊಟ್ಟ ರಾಹುಲ್ ಗಾಂಧಿ! ಸ್ಪೀಕರ್​​ಗೆ ದೂರು ಕೊಟ್ಟ ಸ್ಮೃತಿ ಇರಾನಿ! ದೂರಿನಲ್ಲೇನಿದೆ?