ರಾಜಕೀಯವೈರಲ್ ನ್ಯೂಸ್

ತರಕಾರಿ ಬೆಲೆ ಏರಿಕೆಯಾಗುವುದಕ್ಕೆ ‘ಮುಸ್ಲಿಮರೇ ಕಾರಣ ಎಂದು CM ಹೇಳಿದ್ಯಾಕೆ..? ಏನಿದು ವಿವಾದಾತ್ಮಕ ಹೇಳಿಕೆ?

ನ್ಯೂಸ್ ನಾಟೌಟ್ : ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಏರುತ್ತಿರುವ ತರಕಾರಿ ಬೆಲೆ ಏರಿಕೆ ಇದೀಗ ರಾಜಕೀಯ ವಿರೋಧಿಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ‘ತರಕಾರಿ ಬೆಲೆ ಏರಿಕೆಗೆ ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಕಾರಣ’ ಎಂಬ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಹೇಳಿಕೆ ಈಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಗುವಾಹಟಿಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು, ಈ ಕುರಿತು ಸುದ್ದಿಗಾರರಿಗೆ ಹೇಳಿಕೆ ನೀಡಿರುವ ಹಿಮಂತ ಬಿಸ್ವಾ , ‘ಅಸ್ಸಾಂನ ಗ್ರಾಮೀಣ ಪ್ರದೇಶದಲ್ಲಿ ತರಕಾರಿ ಬೆಲೆ ಏರಿಕೆಯಾಗಿಲ್ಲ. ನಗರ ಪ್ರದೇಶದಲ್ಲಿ ಬೆಲೆ ಏರಿಕೆಯಾಗಲು ಬಂಗಾಳಿ ಮಾತನಾಡುವ ಮುಸ್ಲಿಂ ವ್ಯಾಪಾರಿಗಳು ಕಾರಣರಾಗಿದ್ದಾರೆ. ಅಸ್ಸಾಮಿನ ವ್ಯಾಪಾರಿಗಳಾದರೆ ಜನರು ಬೆಲೆ ನೋಡಿ ಓಡಿ ಹೋಗುವಂತೆ ಮಾಡುತ್ತಿರಲಿಲ್ಲ‘ ಎಂದು ಹೇಳಿದ್ದಾರೆ.

‘ಗುವಾಹಟಿಯ ಎಲ್ಲ ಪುಟ್‌ಪಾತ್‌ಗಳನ್ನು ತೆರವುಗೊಳಿಸುವುದರ ಮೂಲಕ ನಮ್ಮ ಅಸ್ಸಾಮಿ ಜನರು ಮುಂದೆ ಬಂದು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸುವಂತೆ ಮಾಡುತ್ತೇನೆ‘ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಅವರ ಹೇಳಿಕೆಗೆ ಎಐಯುಡಿಎಫ್ (ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಮಿಯಾಗಳು ತರಕಾರಿ ಬೆಲೆಯನ್ನು ನಿಯಂತ್ರಿಸುವುದಿಲ್ಲ. ಮುಖ್ಯಮಂತ್ರಿ ಅವರ ಹೇಳಿಕೆ ಮಿಯಾ ಸಮುದಾಯಕ್ಕೆ ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಇಂತಹ ಹೇಳಿಕೆಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ. ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾದರೆ ಅದಕ್ಕೆ ಮುಖ್ಯಮಂತ್ರಿಗಳು ಮತ್ತು ಸರ್ಕಾರವೇ ನೇರ ಹೊಣೆ’ ಎಂದು ಹೇಳಿದ್ದಾರೆ.

Related posts

2 ಕೋಟಿ ರೂ. ನೋಟು, 50 ಲಕ್ಷ ರೂ. ನಾಣ್ಯಗಳಿಂದ ಗಣಪತಿಗೆ ಶೃಂಗಾರ; ಫೋಟೋಗಳಲ್ಲಿ ನೋಡಿ

ಶಾಲಾ ವಿದ್ಯಾರ್ಥಿಗಳಿದ್ದ ಆಟೋ ರಿಕ್ಷಾ ಪಲ್ಟಿ..! ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು..!

ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಸೆಲೆಬ್ರೆಟಿ! ಇಲ್ಲಿದೆ ಆತನ ಕರುಣಾಜನಕ ಕಥೆ!