ರಾಜಕೀಯವೈರಲ್ ನ್ಯೂಸ್

“CM ಸಿದ್ದರಾಮಯ್ಯ ಈ ತಪ್ಪು ಮಾಡಿದ್ರೆ ದೇವರೇ ನೋಡಿಕೊಳ್ತಾರೆ” ಕೋಡಿಮಠದ ಸ್ವಾಮೀಜಿ ಹೇಳಿದ್ರು ಮತ್ತೊಂದು ಭವಿಷ್ಯ..!

ನ್ಯೂಸ್ ನಾಟೌಟ್: ನಿಜ ಭವಿಷ್ಯ ನುಡಿದು ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಇದೀಗ ಮತ್ತೊಂದು ಭವಿಷ್ಯ ನುಡಿದು ಸುದ್ದಿಯಾಗಿದ್ದಾರೆ. ಈ ಸಲ ಸಿಎಂ ಪಟ್ಟಕ್ಕೆ ಸಿದ್ದರಾಮಯ್ಯ ಸ್ಪಷ್ಟ ಬಹುಮತದಿಂದ ಏರಿದ್ದಾರೆ. ಆದರೆ ಮಾಡಬಾರದ ಕೆಲಸ ಮಾಡಿದರೆ ಅವರಿಗೆ ಅಪಾಯ ಕಾದಿದೆ ಅನ್ನುವ ಮುನ್ಸೂಚನೆಯನ್ನೂ ನೀಡಿದ್ದಾರೆ.

ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಕೋಡಿಮಠ ಶ್ರೀಗಳು ಈ ವೇಳೆ ಮಾತನಾಡಿದ್ದು, ಸಿದ್ದರಾಮಯ್ಯ ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ನಡೆಯುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಆದರೆ, ಸಿಎಂ ಸಿದ್ದರಾಮಯ್ಯನವರು ಧರ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ತಿಳಿಸಿದ್ದಾರೆ. ಗೋಹತ್ಯೆ ನಿಷೇಧದ ಬಗ್ಗೆ, ಗೋಹತ್ಯೆ ನಿಷೇಧ ಕಾನೂನನ್ನು ಹಿಂಪಡೆಯುವ ಕುರಿತು ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ ನಡಿತಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವ ಹೆಜ್ಜೆ ಇಡಲಿದೆ ಅನ್ನುವುದು ಕುತೂಹಲ ಮೂಡಿಸಿದೆ. ಇದಲ್ಲದೆ ಕೋಡಿಮಠದ ಶ್ರೀಗಳು ಹೇಳಿರುವ ಪ್ರಕಾರ, ದೇಶಕ್ಕೆ ಗಂಡಾಂತರ ಮುಗಿದಿಲ್ಲ. ದೇಶಕ್ಕೆ ಒಂದು ಗಂಡಾಂತರ ಎದುರಾಗಲಿದೆ. ಮಳೆ, ಗುಡುಗು, ಮಿಂಚು ಏಕಾಏಕಿ ಅಪ್ಪಳಿಸಲಿದೆ. ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿದೆ. ಬೇರೆಡೆ ನಡೆಯುವ ಬಾಂಬ್ ದಾಳಿಗೆ ದೇಶಕ್ಕೆ ಹಾನಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಗಿಡ, ಮರಗಳು ದೈವದ ಆರಾಧ್ಯದ ಸಂಕೇತವಾಗಿದೆ. ಕೈವಾರ ತಾತಯ್ಯನವರು ಮತ್ತೆ ಹುಟ್ಟಿ ಬರುವ ಸೂಚನೆ ಸಿಕ್ಕಿದೆ ಎಂದರು.

Related posts

ಲಾಟರಿ ಮೊತ್ತ ಸ್ವೀಕರಿಸಲು ಹೋದ ವ್ಯಕ್ತಿಗೆ ಶಾಕ್ ಕೊಟ್ಟ ಕಂಪನಿ! 2,800 ಕೋಟಿ ರೂ. ಲಾಟರಿ ಒಲಿದ ಮೇಲೂ ಆತ ಕೋರ್ಟ್ ಮೆಟ್ಟಿಲೇರಿಸಿದ್ದೇಕೆ..?

ಕನಸಿನಲ್ಲಿ ದೇವಿ ನರಬಲಿ ಕೇಳಿದಳು ಎಂದು ಸಂಬಂಧಿಯನ್ನೇ ಹತ್ಯೆಗೈದ ಮಹಿಳೆ..! ಏನಿದು ವಿಚಿತ್ರ ಘಟನೆ..?

ಅರಂತೋಡು: ಅಡ್ತಲೆ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ , ಮಾಜಿ ಸಚಿವ ಎಸ್.ಅಂಗಾರರಿಗೆ ಸನ್ಮಾನ,ನೂತನ ಶಾಸಕಿ ಕು.ಭಾಗೀರಥಿ ಮುರಳ್ಯರಿಗೆ ಅಭಿನಂದನಾ ಕಾರ್ಯಕ್ರಮ