ಕ್ರೈಂಬೆಂಗಳೂರುರಾಜಕೀಯ

ಸಿಎಂ ಸಿದ್ದರಾಮಯ್ಯಗೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟಿಸ್..! ಮುಡಾ ಹಗರಣದಲ್ಲಿ ಸಿದ್ದರಾಮಯ್ಯ A1 ಆರೋಪಿ ಎಂದು ಉಲ್ಲೇಖ..!

ನ್ಯೂಸ್ ನಾಟೌಟ್: ಮುಡಾ (Muda) ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಇಂದು(ನ.4) ನೋಟಿಸ್ ಜಾರಿ ಮಾಡಿದೆ.

ನವೆಂಬರ್ 6 ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಮುಡಾ 50:50 ಪ್ರಕರಣಕ್ಕೆ ಸಂಭಂಧಿಸಿ ಈಗಾಗಲೇ A2,A3,A4 ವಿಚಾರಣೆ ನಡೆಸಲಾಗಿದೆ. ಕಳೆದ ವಾರ A2 ಸಿಎಂ ಪತ್ನಿ ಪಾರ್ವತಿ ವಿಚಾರಣೆ ಮುಕ್ತಾಯಗೊಂಡಿದೆ. ಇದೀಗ A1 ಆರೋಪಿ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಲಾಗಿದೆ. ಖುದ್ದು ಲೋಕಾಯುಕ್ತದ ಎದುರು ಹಾಜರಾಗುವಂತೆ ನೋಟಿಸ್‌ ನಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಮುಡಾದ ಮಾಜಿ ಆಯುಕ್ತರ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಸಿದ್ದರಾಂಯ್ಯನವರ ಆಪ್ತ ಪಾಪಣ್ಣ ನಿವಾಸದ ಮೇಲೂ ಸಹ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಜೀವನದ ಮೊದಲ ವಿಚಾರಣೆ ಇದಾಗಿದೆ. ಅವರು ಸುಮಾರು 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಯಾವುದೇ ರೀತಿ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿರಲಿಲ್ಲ. ಆದರೆ ಇದೀಗ ಸಿದ್ದರಾಮಯ್ಯನವರಿಗೆ ಮುಡಾ ಕಂಟಕ ಎದುರಾಗಿದ್ದು, ತಮ್ಮ 40 ವರ್ಷ ಸುದೀರ್ಘ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದ ಮುಂದೆ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.

Click

https://newsnotout.com/2024/11/95-days-sharuk-khan-kannada-news-fans-viral-news/
https://newsnotout.com/2024/11/guruprasad-kananda-news-lawyer-gajadeesh-kannada-news-video/
https://newsnotout.com/2024/11/bantwal-kannada-news-bike-and-bus-collision-hospitalized/
https://newsnotout.com/2024/11/duplicate-document-creation-and-waqf-issue-bjp/
https://newsnotout.com/2024/11/online-gaming-kannada-news-guruprasad-about-director-and-jaggesh/
https://newsnotout.com/2024/11/kannada-news-cctv-putage-kannada-news-crackers/

Related posts

ಸಿಟಿ ರವಿ ಸೋಲಿಗೆ ಸ್ವಪಕ್ಷೀಯ ಅಸಮಾಧಾನಗಳು ಕಾರಣವಾದವಾ? ಹಿಂದೂ ಫೈರ್‌ ಬ್ರ್ಯಾಂಡ್‌ ಸೋಲಿಗೆ ಇಲ್ಲಿವೆ 8 ಪ್ರಮುಖ ಕಾರಣಗಳು?

ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದ ಪಾಪಿ, ಬರ್ಬರ ಹತ್ಯೆಗೆ ಸಾಕ್ಷಿಯಾದ ಉದ್ಯಾನನಗರಿ

ತಡರಾತ್ರಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಉಪಪ್ರಧಾನಿ ಎಲ್‌.ಕೆ ಅಡ್ವಾಣಿ, ವೈದ್ಯರು ಹೇಳಿದ್ದೇನು..?