ರಾಜಕೀಯವೈರಲ್ ನ್ಯೂಸ್

ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಕೇಸ್..! ಮೊಕದ್ದಮೆ ಹೂಡಲು ಸಿಎಂ ಸಿದ್ದರಾಮಯ್ಯ ತಯಾರಿ..!

ನ್ಯೂಸ್‌ ನಾಟೌಟ್‌: ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡಿರುವ ಪ್ರಮುಖ ಐದು ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತುಗಳನ್ನು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ(ನ.18) ಹೇಳಿದ್ದಾರೆ.

ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಜಾಹೀರಾತು ನೀಡಿದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾನೂನು ಕ್ರಮದ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

‘ಮತ ಪಡೆಯುವ ಸಲುವಾಗಿ ಮಹಾರಾಷ್ಟ್ರದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರವು ಸುಳ್ಳು ಜಾಹೀರಾತು ನೀಡುತ್ತಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಸಿಎಂ ಗುಡುಗಿದ್ದಾರೆ.

“ಕುಮಾರಸ್ವಾಮಿ(ಕೇಂದ್ರ ಸಚಿವ) ದೆಹಲಿಯಲ್ಲಿ ಮಾತನಾಡಲಿ, ಕರ್ನಾಟಕ ವರ್ಷಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದೆ. ಆದರೆ ನಮಗೆ ಸಿಗುವುದು 59,000-60,000 ಕೋಟಿ ರೂ. 1 ರೂ. ನಾವು ಕೊಟ್ಟು 14 ಪೈಸೆ ವಾಪಸ್ ಪಡೆಯುತ್ತಿದ್ದೇವೆ. ಉಳಿದ ಹಣ ಕೇಂದ್ರದ ಬಳಿ ಇದೆ., ಸುಮ್ಮನೆ ಮಾತನಾಡುವ ಬದಲು ಅವರು(ಕುಮಾರಸ್ವಾಮಿ) ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲಿ” ಎಂದು ಕೇಂದ್ರ ಸಚಿವರಿಗೆ ಸಿಎಂ ಹೇಳಿದ್ದಾರೆ.

Click

https://newsnotout.com/2024/11/bpl-cacellation-process-and-trasfer-to-apl-kannada-news-d/
https://newsnotout.com/2024/11/bjp-and-congress-viral-news-praghallad-joshi-v/
https://newsnotout.com/2024/11/mangaluru-ullala-3-girls-issue-manager-and-owner-arrested-kananda-news-d/
https://newsnotout.com/2024/11/lady-make-a-complaint-on-man-who-met-in-dating-app-kannad-anews-d/
https://newsnotout.com/2024/11/children-cyber-crime-kannada-news-viral-news-police-investigation/

Related posts

ಮಳೆ ನೀರು ತಾಗದಂತೆ ತಂಗಿಯನ್ನು ಕಾಪಾಡಿದ ಸಹೋದರ! ಮಕ್ಕಳ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್ !

ಎಲೋನ್‌ ಮಸ್ಕ್‌ ನ ‘ಸ್ಪೇಸ್‌ ಎಕ್ಸ್‌’ ರಾಕೆಟ್‌ ನಲ್ಲಿ ಮೊಟ್ಟ ಮೊದಲ ಬಾರಿಗೆ ಇಸ್ರೋ ಉಪಗ್ರಹ ಉಡಾವಣೆ, ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಕಕ್ಷೆಗೆ

ದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ಕೋಣ ನಾಪತ್ತೆ..! ಹುಡುಕಿ-ಹುಡುಕಿ ಸಿಗದಿದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು