ಬೆಂಗಳೂರುರಾಜಕೀಯ

ವಾಸ್ತು ಇಲ್ಲ ಏನೂ ಇಲ್ಲ ಎಂದು ವಿಧಾನ ಸೌಧದ ಸಿಎಂ ಕಚೇರಿ ಬಾಗಿಲು ತೆರೆದು ಮೂಡನಂಬಿಕೆಯ ಕಿತ್ತೊಗೆದ ಸಿಎಂ ಸಿದ್ದರಾಮಯ್ಯ..! ಪಶ್ಚಿಮ ದ್ವಾರದಲ್ಲಿ ಅಂಥದ್ದೇನಿದೆ?

ನ್ಯೂಸ್ ನಾಟೌಟ್: ವಿಧಾನ ಸೌಧದಲ್ಲಿ ಮೂಡ ನಂಬಿಕೆಯನ್ನು ಕಿತ್ತೊಗೆಯುವ ಮೂಲಕ ಸಿಎಂ ಸಿದ್ದರಾಮಯ್ಯ ವಿನೂತನ ಹೆಜ್ಜೆ ಇಟ್ಟಿದ್ದಾರೆ.
ವಾಸ್ತು ಸರಿ ಇಲ್ಲ ಎಂದು ವಿಧಾನಸೌಧದಲ್ಲಿರುವ ಸಿಎಂ ಕಚೇರಿಯಲ್ಲಿದ್ದ ಪಶ್ಚಿಮ ದ್ವಾರವನ್ನು ಬಂಧ್ ಮಾಡಲಾಗಿತ್ತು. ಇದು ಇದುವರೆಗೆ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿರಲಿಲ್ಲ.

ಶನಿವಾರ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ವೇಳೆ ಅಧಿಕಾರಿಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಯಾಕೆ ಈ ಬಾಗಿಲು ಬಂದ್ ಮಾಡಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಸಿಎಂ ಪ್ರಶ್ನೆಗೆ ಅಧಿಕಾರಿಗಳು ವಾಸ್ತು ಕಾರಣದಿಂದ ಬಂದ್ ಮಾಡಿದ್ದೇವೆ ಎಂದು ಹೇಳಿದರು. ಈ ಕೂಡಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರಯ ಯಾವ ವಾಸ್ತೂ ಕೂಡ ಇಲ್ಲ. ಪಶ್ಚಿಮ ದ್ವಾರ ತೆರೆಯಿರಿ ಎಂದು ಆದೇಶಿಸಿದರು. ಬಳಿಕ ಬಾಗಿಲು ತೆರೆದಾಗ ಸಿದ್ದರಾಮಯ್ಯ ಪಶ್ಚಿಮ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು. ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಒಳ್ಳೆಗಾಳಿ ಬೆಳಕು ಬಂದರೆ ಉತ್ತಮ ವಾಸ್ತು ಎಂದಿದ್ದಾರೆ.

Related posts

ಟಿಕೆಟ್‌ ದರ ಏರಿಸದಿದ್ದರೆ KSRTC ಸಂಸ್ಥೆ ಉಳಿಯಲ್ಲ ಎಂದ ನಿಗಮದ ಅಧ್ಯಕ್ಷ..! ದರ ಹೆಚ್ಚಳ ಪುರುಷರಿಗೆ ಮಾತ್ರವಾ..? ಶಾಸಕ ಹೇಳಿದ್ದೇನು..?

ಚಹಾ ಮಾರುತ್ತಿದ್ದ ಬಡ ಮಹಿಳೆ ಗ್ರಾ.ಪಂ. ಅಧ್ಯಕ್ಷೆಯಾಗಿ ಆಯ್ಕೆ..! ಅವಿರೋಧ ಆಯ್ಕೆಯ ಬಗ್ಗೆ ಆಕೆ ಹೇಳಿದ್ದೇನು?

Kerala election result: ಕೊಯಮತ್ತೂರಿನಲ್ಲಿ ‘ಸಿಂಗಂ’ ಅಣ್ಣಾಮಲೈಗೆ ಸೋಲು, ಕೇರಳದಲ್ಲಿ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ ಬಿಜೆಪಿ