ಕ್ರೈಂದೇಶ-ವಿದೇಶರಾಜಕೀಯವಿಡಿಯೋವೈರಲ್ ನ್ಯೂಸ್

ಕೂದಲೆಳೆ ಅಂತರದಲ್ಲಿ ಬಚಾವಾದ ಆಂಧ್ರ ಸಿಎಂ..! ರೈಲ್ವೆ ಸೇತುವೆಯ ಮೇಲೆ ಪ್ರವಾಹ ಪರಿಸ್ಥಿತಿ ವೀಕ್ಷಿಸುತ್ತಿದ್ದಾಗ ಅನಿರೀಕ್ಷಿತವಾಗಿ ಬಂದ ರೈಲು..! ಇಲ್ಲಿದೆ ವಿಡಿಯೋ

271

ನ್ಯೂಸ್ ನಾಟೌಟ್ : ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಅವರ ತಂಡ ಭಾರಿ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ(ಆ.5) ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ತಂಡ ವಿಜಯವಾಡದ ಬುಡಮೇರು ರೈಲ್ವೆ ಸೇತುವೆಯ ಮೇಲೆ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲು ಬಂದಿದ್ದಾರೆ ಈ ವೇಳೆ ಅವರ ಪಕ್ಕದಲ್ಲೇ ರೈಲೊಂದು ವೇಗವಾಗಿ ಸಂಚರಿಸಿದ್ದು ಮುಖ್ಯಮಂತ್ರಿ ಹಾಗೂ ಅವರ ಜೊತೆಗಿದ್ದ ತಂಡ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅದರಂತೆ ಸಿಎಂ ನಾಯ್ಡು ಅವರು ಅಧಿಕಾರಿಗಳ ಜೊತೆ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಮುಂದಾಗಿದ್ದಾರೆ, ಈ ವೇಳೆ ರೈಲು ಸಂಚಾರಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬುಡಮೇರು ರೈಲು ಸೇತುವೆಯ ಮೇಲೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಸಿಎಂ ಹಾಗೂ ತಂಡ ಸಂಚರಿಸಿದ್ದಾರೆ, ಈ ಸೇತುವೆಯಲ್ಲಿ ಪಾದಚಾರಿಗಳಿಗೆ ಸಂಚರಿಸಲು ಕಡಿಮೆ ಸ್ಥಳ ಇತ್ತು ಎಂದು ಕೂಡ ಹೇಳಲಾಗಿದೆ, ಹಾಗೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡುವ ವೇಳೆ ರೈಲು ಬಂದಿದೆ ಕೂಡಲೇ ಎಚ್ಚೆತ್ತ ಭದ್ರತಾ ಸಿಬಂದಿ ಮುಖ್ಯಮಂತ್ರಿಗಳನ್ನು ಸೇತುವೆಯ ಬದಿಗೆ ಎಳೆದಿದ್ದಾರೆ ಈ ವೇಳೆ ಸಿಎಂ ನಾಯ್ಡು ಪಕ್ಕದಲ್ಲೇ ರೈಲು ಹಾದು ಹೋಗಿದೆ.

ವಿಶೇಷವೆಂದರೆ ಕಳೆದ 5 ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ನಾಯ್ಡು ಹಲವು ಬಾರಿ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿರುವುದು ಬೆಳಕಿಗೆ ಬಂದಿದೆ.

Click

https://newsnotout.com/2024/09/cinema-shooting-light-man-nomore-knnada-news-yograj-bhat-direction/
https://newsnotout.com/2024/09/ettina-hole-cm-siddaramayya-vartha-ilake-kannada-news/
https://newsnotout.com/2024/09/fishing-in-karavara-boat-under-storm-in-sea-kannada-news-malpe/
https://newsnotout.com/2024/09/muslim-kannada-news-biriyani-in-tiffin-box-school-principal/
See also  ಬೆಳ್ತಂಗಡಿ: ಬಾಂಗ್ಲಾ ಪ್ರಧಾನಿಯಂತೆ ಮೋದಿ ಹಾಸಿಗೆ, ದಿಂಬು ಹಿಡಿದುಕೊಂಡು ಓಡಬೇಕಾಗುತ್ತದೆ ಎಂದ ಕಾಂಗ್ರೆಸ್ ಮುಖಂಡ..! ಮುಡಾ ಹಗರಣ ಸಂಬಂಧ ಪ್ರತಿಭಟನೆಯ ವೇಳೆ ರಕ್ಷಿತ್ ಶಿವರಾಮ್ ವಿವಾದ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget