ಕ್ರೈಂಬೆಂಗಳೂರುರಾಜಕೀಯವೈರಲ್ ನ್ಯೂಸ್

ಸಿಎಂ ಮುಂದೆ ಶರಣಾಗಿದ್ದ 6 ಜನ ನಕ್ಸಲರಿಗೆ ನ್ಯಾಯಾಂಗ ಬಂಧನ..! ಉಳಿದಿರುವ ಏಕೈಕ ನಕ್ಸಲ್ ರವೀಂದ್ರನಿಗಾಗಿ ಹುಡುಕಾಟ..!

ನ್ಯೂಸ್ ನಾಟೌಟ್: ಕರ್ನಾಟಕ ಸರ್ಕಾರದ ಮುಂದೆ ನಿನ್ನೆ (ಬುಧವಾರ) 6 ನಕ್ಸಲ್ ನಾಯಕರು ಶರಣಾಗಿದ್ದರು. ರಾಜ್ಯದ ನಕ್ಸಲ್ ನಾಯಕರಾದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್, ಮಾರೆಪ್ಪ ಅರೋಲಿ ಅವರನ್ನು ಇಂದು(ಜ.9) ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಎನ್‌ ಐಎ ವಿಶೇಷ ಕೋರ್ಟ್‌ ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರುಪಡಿಸಿದ್ದರು. ಆ ಆರು ನಕ್ಸಲರಿಗೆ ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.

ಶರಣಾದ 6 ನಕ್ಸಲರನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ NIA ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ನಕ್ಸಲರನ್ನು ಕೋರ್ಟ್​ಗೆ ಹಾಜರು ಪಡಿಸಿರುವ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ನಕ್ಸಲರನ್ನು ಕೋರ್ಟ್​ಗೆ ಹಾಜರುಪಡಿಸುವ ಮುನ್ನ 6 ನಕ್ಸಲರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಶರಣಾದ ನಕ್ಸಲರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರಿದ್ದಾರೆ. ಅವರಲ್ಲಿ ತಮಿಳುನಾಡು ಮೂಲದ ವಸಂತ್ ಎಂಬಾತ ಬಿಟೆಕ್ ಪದವೀಧರನಾಗಿದ್ದಾನೆ. ಕರ್ನಾಟಕದಲ್ಲಿ ಉಳಿದಿರುವ ಏಕೈಕ ನಕ್ಸಲ್ ರವೀಂದ್ರನಿಗಾಗಿ ಹುಡುಕಾಟ ನಡೆಯುತ್ತಿದೆ. ಆತ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ಕರ್ನಾಟಕದ 8 ನಕ್ಸಲರ ಪೈಕಿ ಇತ್ತೀಚೆಗೆ ವಿಕ್ರಂಗೌಡ ಎನ್​ಕೌಂಟರ್ ಮಾಡಲಾಗಿದೆ. 7 ಜನರ ಪೈಕಿ ನಿನ್ನೆ 6 ನಕ್ಸಲರ ಶರಣಾಗತಿಯಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಮಾತ್ರ ಶರಣಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಕೇಸ್​​ಗಳಿವೆ. ನಕ್ಸಲ್ ಶರಣಾಗತಿ ಕಮಿಟಿ ಸಂಪರ್ಕಕ್ಕೂ ಸಿಕ್ಕಿಲ್ಲ. ಕಳೆದ 18 ವರ್ಷಗಳಿಂದ ಭೂಗತವಾಗಿರುವ ನಕ್ಸಲ್​​ ರವೀಂದ್ರ, ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ. ಆ ಮೂಲಕ ರಾಜ್ಯದ ನಕ್ಸಲರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.

Click

https://newsnotout.com/2025/01/kannada-news-bhopal-central-jail-kannad-anews-china-drone-found-d/
https://newsnotout.com/2025/01/wedding-annuarsery-kannada-news-after-couple-nomore-kannada-news/
https://newsnotout.com/2025/01/thirupathi-temple-pddlingg-issue-rush-kannada-news-s/
https://newsnotout.com/2025/01/kannada-news-hair-fall-kannada-news-30-to-40-people-issue/
https://newsnotout.com/2025/01/sullia-mother-misbehaviour-with-doubter-kannada-news-d/
https://newsnotout.com/2025/01/kannada-news-january-alchohol-kannada-news/
https://newsnotout.com/2025/01/1500-kannada-news-buiding-america-fire-issue-with-wind/

Related posts

ಸಂಪಾಜೆ: ಕಾರು -ಬಸ್ ಭೀಕರ ಅಪಘಾತ: ಕೊಡಗಿ ಎಸ್.ಪಿ ಮತ್ತು ಎ.ಎಸ್.ಪಿ ಸುಳ್ಯ ಆಸ್ಪತ್ರೆಗೆ ಭೇಟಿ, ಪರಿಶೀಲನೆ, ಮೂವರ ಗುರುತು ಪತ್ತೆ

ಗೂಗಲ್‌ಗೆ 25ನೇ ಹುಟ್ಟುಹಬ್ಬ..! ಈ ಬಗ್ಗೆ ಗೂಗಲ್ ಹೇಳಿದ್ದೇನು? ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಹಂಚಿಕೊಂಡ ‘ಗಿಫ್ಟ್’ ಇಲ್ಲಿದೆ ನೋಡಿ

ಉಪ್ಪಿನಂಗಡಿ ಠಾಣಾ ಹೆಡ್ ಕಾನ್‌ಸ್ಟೇಬಲ್ ಕೃಷ್ಣಪ್ಪ ನಾಯ್ಕ್ ನಿಧನ