Latestಕ್ರೈಂವೈರಲ್ ನ್ಯೂಸ್

ಸಿಎಂ ವಿರುದ್ಧ ನನಗೆ ಅತಿ ಹೆಚ್ಚಿನ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್ ನವರು ಎಂದ ದೂರುದಾರ..! ಮುಡಾ ಕೇಸ್ ಬಗ್ಗೆ ಸ್ಪೋಟಕ ಹೇಳಿಕೆ..!

639

ನ್ಯೂಸ್ ನಾಟೌಟ್: ಮುಡಾ ಹಗರಣದಲ್ಲಿ ನನಗೆ ಸಿಎಂ ವಿರುದ್ಧ ಅತಿ ಹೆಚ್ಚಿನ ದಾಖಲೆ ಕೊಟ್ಟಿದ್ದೆ ಕಾಂಗ್ರೆಸ್ ನಾಯಕರು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಡಾ ಹಗರಣದ ವಿಚಾರದಲ್ಲಿ ಕಳೆದ ಜನವರಿ ತಿಂಗಳಿಂದ ನನಗೆ ಅತಿ ಹೆಚ್ಚಿನ ದಾಖಲೆಗಳು ಕಾಂಗ್ರೆಸ್ ನಾಯಕರಿಂದ ಬಂದಿವೆ. ಕಾಂಗ್ರೆಸ್ ನಾಯಕರು ಕೊಟ್ಟಿರುವ ದಾಖಲೆಗಳು ನನ್ನ ಹೋರಾಟದ ವೇಗ ಹೆಚ್ಚಿಸಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ ನಲ್ಲೂ ಸಿಎಂ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ಇರುವ ಜನ ಹೆಚ್ಚಿದ್ದಾರೆ. ಪಕ್ಷದ ಒಳಗೆ ಅದನ್ನು ತೋರಿಸಲು ಅವರಿಗೆ ಆಗಲ್ಲ. ಹೀಗಾಗಿ, ನನಗೆ ದಾಖಲೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಯಾವ ಹಂತದ ನಾಯಕರು, ಅವರು ಯಾರು ಅನ್ನೋದನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ.

 

See also  ಸುಳ್ಯ: ರಿಕ್ಷಾ - ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget