Latestಕ್ರೈಂಬೆಂಗಳೂರುವೈರಲ್ ನ್ಯೂಸ್

ಮುಖ್ಯಮಂತ್ರಿಗಳ ಪದಕ ಪಡೆಯಬೇಕಿದ್ದ ಇನ್ಸ್‌ ಪೆಕ್ಟರ್‌ ಬಂಧನ ಭೀತಿಯಿಂದ ಪರಾರಿ..! ಇಬ್ಬರು ಕಾನ್ಸ್ ​ಟೇಬಲ್ ​ಗಳು ಸೇರಿ ಐವರು ಅರೆಸ್ಟ್..!

1.3k

ನ್ಯೂಸ್‌ ನಾಟೌಟ್: ಲೋಕಾಯುಕ್ತ ಬಂಧನ ಭೀತಿಯಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯಬೇಕಿದ್ದ ಇನ್ಸ್‌ ಪೆಕ್ಟರ್‌ವೊಬ್ಬರು ಪರಾರಿಯಾಗಿರುವಂತಹ ಘಟನೆ ನಡೆದಿದೆ.

ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಬೆಂಗಳೂರು ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಇನ್ಸ್‌ ಪೆಕ್ಟರ್ ಕುಮಾರ್ ಆಯ್ಕೆಯಾಗಿದ್ದರು. ಇಂದು(ಎ.2) ಮುಖ್ಯಮಂತ್ರಿಗಳಿಂದ ಪದಕ ಪಡೆಯಬೇಕಿತ್ತು. ಆದರೆ ಮಂಗಳವಾರ ರಾತ್ರಿಯೇ ಅವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗುತ್ತಿಗೆದಾರ ಚನ್ನೇಗೌಡ ಎಂಬವರ ಪತ್ನಿ ಅನುಷಾ ಎಂಬುವವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್‌ ಪೆಕ್ಟರ್‌​ ಕುಮಾರ್ ​ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಸುಳ್ಳು ಪ್ರಕರಣ ದಾಖಲಿಸಿ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್‌ಪೆಕ್ಟರ್‌​ ಕುಮಾರ್ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಅಗ್ರಿಮೆಂಟ್ ​ಗೆ ಸಹಿ ಹಾಕಿಸಲು ನಾಗರಬಾವಿಯ ಖಾಸಗಿ ಹೋಟೆಲ್​ಗೆ ಚನ್ನೇಗೌಡ ಅವರ ಪತ್ನಿ ಅನುಷಾರನ್ನು ಕರೆಸಿದ್ದರು. ಈ ವೇಳೆ ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ ಕುಮಾರ್ ಪರಾರಿ ಆಗಿದ್ದಾರೆ. ಆದರೆ, ಇಬ್ಬರು ಕಾನ್ಸ್ ​ಟೇಬಲ್ ​ಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ80 ದೇಶಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ..!ಇಸ್ಲಾಂ ರಾಷ್ಟ್ರಗಳಿಂದಲೂ ಬೇಡಿಕೆ..!

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸತ್ತಿಲ್ಲ..! ಕೈಲಾಸ ದೇಶದಿಂದ ಬಂತು ಸ್ಪಷ್ಟನೆ..!

See also  ರಾತ್ರಿ ಊಟ ಮುಗಿಸಿ ಮಲಗಿದಾತ ಬೆಳಗ್ಗೆ ಏಳಲೇ ಇಲ್ಲ..! ಮಳೆ ಅವಾಂತರಕ್ಕೆ ದುರಂತ ಅಂತ್ಯ ಕಂಡ ಬಡ ಜೀವ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget