ಬೆಂಗಳೂರು

12ನೇ ಮಹಡಿಯಿಂದ ಬಿದ್ದು ತನ್ನ ಜೀವನವನ್ನೇ ಕತ್ತಲನ್ನಾಗಿಸಿದ SSLC ವಿದ್ಯಾರ್ಥಿನಿ..!,ಆಕೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾದರೂ ಏನು?

ನ್ಯೂಸ್ ನಾಟೌಟ್ : ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿಯ ವಿದ್ಯಾರ್ಥಿನಿ (Student) ದಾರುಣವಾಗಿ ಅಂತ್ಯವಾದ ಘಟನೆ ನಗರದ ಬೆಳ್ಳಂದೂರಿನ (Bellandoor) ಕ್ಲಾಸಿಕ್ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.ಜೆಸ್ಸಿಕಾ (15) ಬಾಲಕಿಯ ಹೆಸರು.ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ಘಟನೆ ನಡೆದಿದೆ.

ಮೂಲತಃ ತಮಿಳುನಾಡಿನ ಕುಟುಂಬವಾಗಿದ್ದು, ತಂದೆ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಜೆಸ್ಸಿಕಾ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.ಕಳೆದ 2 ವರ್ಷಗಳಿಂದ ಬಾಲಕಿ (Girl) ತನ್ನ ತಂದೆ ಹಾಗೂ ತಾಯಿಯೊಂದಿಗೆ ಕ್ಲಾಸಿಕ್ ಅಪಾರ್ಟ್ಮೆಂಟ್‌ನ 11ನೇ ಮಹಡಿಯಲ್ಲಿ ವಾಸವಿದ್ದಳು.

ಇತ್ತೀಚೆಗೆ ಬಾಲಕಿ ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ ಎಂಬುದು ತಿಳಿದುಬಂದಿದೆ. ಕಳೆದ 3 ತಿಂಗಳಲ್ಲಿ 6 ದಿನ ಮಾತ್ರವೇ ಜೆಸ್ಸಿಕಾ ಶಾಲೆಗೆ ಹೋಗಿದ್ದಳು. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ಪುನಃ ವಾಪಸ್ ಬಂದಿದ್ದಾಳೆ. ನಂತರ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಪೋಷಕರು ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಜೆಸ್ಸಿಕಾ ಕುಟುಂಬ ವಾಸವಿದ್ದ ಫ್ಲೋರ್‌ನ ಮೇಲಿನ ಫ್ಲೋರ್‌ಗೆ ಹೋಗಿದ್ದಾಳೆ. ಮನೆಯಲ್ಲಿ, ಅಕ್ಕ-ಪಕ್ಕದಲ್ಲಿ ಯಾರೂ ಇಲ್ಲದ ಸಂದರ್ಭ 12ನೇ ಫ್ಲೋರ್‌ನಿಂದ ಬಿದ್ದಿದ್ದಾಳೆ.ಆಕೆ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ.ಘಟನೆ ಬಗ್ಗೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Related posts

ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ 1760 ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ..

ಮಗನ ಬಗ್ಗೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದ ಸ್ಪಂದನಾ..!,ನಟ ವಿಜಯ್ ಪತ್ನಿ ಆಸೆಗಳ ಬುತ್ತಿಯನ್ನು ತೆರೆದಿಟ್ಟ ನಿರ್ದೇಶಕ  ..

ಬ್ರಿಜ್ ಭೂಷಣ್ ಸಿಂಗ್‌ ಬೆಂಗಳೂರು ಕಂಬಳಕ್ಕೆ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್‌ ರೈ