ಕರಾವಳಿಕ್ರೈಂ

ಬೆಳ್ತಂಗಡಿ: ಯುವತಿಯೊಂದಿಗೆ ಮಾತನಾಡಿದ ಅನ್ಯಕೋಮಿನ ಯುವಕ! ಯುವಕರ ತಂಡದಿಂದ ಹಲ್ಲೆ!

169

ನ್ಯೂಸ್ ನಾಟೌಟ್: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪರಿಚಯಸ್ಥ ಯುವತಿಯೊಂದಿಗೆ ಮುಸ್ಲಿಂ ಯುವಕ ಮಾತನಾಡಿದಕ್ಕಾಗಿ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ವರದಿಯಾಗಿದೆ.

ಘಟನೆಯ ವಿವರ:

ಹಲ್ಲೆಗೊಳಗಾದ ಜಹೀರ್ ಎಂಬ ವ್ಯಕ್ತಿ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಪರಿಚಯದ ಯುವತಿ ಸಿಕ್ಕಲೆಂದು ಯುವತಿಯೊಂದಿಗೆ ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಯುವತಿ ಬೆಳ್ತಂಗಡಿಯಲ್ಲಿ ಇಳಿದ ತಕ್ಷಣ ಬಸ್ಸಿನಲ್ಲಿ ಇವರನ್ನು ಗಮನಿಸಿದವರು ಯಾರೋ ಉಜಿರೆಯ ಯುವಕರಿಗೆ ಮಾಹಿತಿ ನೀಡಿದ್ದು,. ಈತನಿಗಾಗಿ ಉಜಿರೆಯಲ್ಲಿ ಕಾದು ನಿಂತಿದ್ದ ಯುವಕರ ತಂಡ ಬಸ್ಸಿನಿಂದ ಹೊರಗೆಳೆದು ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಮದು ವರದಿ ತಿಳಿಸಿದೆ.

ಹಲ್ಲೆಗೆ ಒಳಗಾಗಿರುವ ಜಹೀರ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ಅಯ್ಯಪ್ಪ ಮಾಲಾಧಾರಿ ಆತ್ಮಹತ್ಯೆ, ಆಶ್ರಮದಲ್ಲೇ ನೇಣು ಬಿಗಿದುಕೊಂಡ 30 ವರ್ಷದ ಯುವಕ
  Ad Widget   Ad Widget   Ad Widget   Ad Widget   Ad Widget   Ad Widget