ನ್ಯೂಸ್ ನಾಟೌಟ್: ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಫೆಬ್ರುವರಿ 10 ರಂದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸರ್ಕಾರದಡಿ ಅರ್ಹರು ಉದ್ಯೋಗ ಪಡೆಯಲು ಇದು ಸದಾವಕಾಶ.
ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಹತೆ, ವೇತನ ಶ್ರೇಣಿ, ವಿದ್ಯಾರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕದ ಮಾಹಿತಿಯನ್ನು ನೀಡಲಾಗಿದೆ.
ಸಿವಿಲ್ ನ್ಯಾಯಾಧೀಶರು ( Civil Judges) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು158 ಉದ್ಯೋಗಗಳು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಮಾಸಿಕ ವೇತನ 77,840 ದಿಂದ 1,36,520 ರೂಪಾಯಿಗಳು ಇವೆ.
ಅಭ್ಯರ್ಥಿಯು ಕಾನೂನು ಪದವಿ ಹೊಂದಿದ್ದು ಹಾಗೂ ಕಡ್ಡಾಯವಾಗಿ ವಕೀಲರಾಗಿ ದಾಖಲಾಗಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವವರು 40 ವರ್ಷದ ಒಳಗಿನವರಿಗೆ ಅವಕಾಶ ಇದೆ ಮತ್ತು ವಯೋಮಿತಿ ಸಡಿಲಿಕೆ ಇದೆ ಎನ್ನಲಾಗಿದೆ. ಎಸ್ಸಿ. ಎಸ್ಟಿ, ಪ್ರ-1, ವಿಶೇಷ ಚೇತನರು- 500 ರೂಪಾಯಿ ಶುಲ್ಕ ವಿಧಿಸಲಾಗಿದೆ. ಜನರಲ್, ಒಬಿಸಿ, ಇತರೆ ಅಭ್ಯರ್ಥಿಗಳು- 1,000 ರೂಪಾಯಿ ಶುಲ್ಕ ಕಟ್ಟಬೇಕಾಗಿದೆ.
ಆಯ್ಕೆಯ ಪ್ರಕ್ರಿಯೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಮೌಖಿಕ ಸಂವಹನ (Viva-Voce), ಕಂಪ್ಯೂಟರ್ ಪರೀಕ್ಷೆಗಳನ್ನು ಒಳಗೊಂಡಿರಲಿದೆ. ಅರ್ಜಿ ಸಲ್ಲಿಕೆ ಮಾಡಲು 12 ಮಾರ್ಚ್ 2025 ರಂದು ಕೊನೆಯ ದಿನಾಂಕ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.