ಕರಾವಳಿ

ಸುಳ್ಯ: CITU ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ, 60 ವರ್ಷ ಪ್ರಾಯದ ನಿವೃತ್ತ ಕಾರ್ಮಿಕರಿಗೆ ರೂ.1 ಲಕ್ಷ ನೀಡುವಂತೆ ಒತ್ತಾಯ

291

ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ( CITU) ಸುಳ್ಯ ತಾಲೂಕು ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸುಳ್ಯ ತಾಲೂಕು ಪಂಚಾಯತ್ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಅಕ್ಷರ ದಾಸೋಹ ನೌಕರರ ಏರಿಕೆಯಾದ ಮಾಸಿಕ ವೇತನ ರೂ.1,OOO ನೀಡಲು ಆದೇಶ ಪ್ರತಿ ಕೂಡಲೇ ಹೊರಡಿಸಬೇಕು, ಮಾಸಿಕ ವೇತನ 12,000 ಸಾವಿರ ನೀಡುವಂತೆ ಇದೇ ವೇಳೆ ಒತ್ತಾಯಿಸಲಾಯಿತು.

60 ವರ್ಷ ಪ್ರಾಯದ ನಿವೃತ್ತ ಕಾರ್ಮಿಕರಿಗೆ ಇಡುಗಂಟು ರೂ.1 ಲಕ್ಷ ನೀಡಬೇಕು ಎಂದು ಒತ್ತಾಯಿಸಲಾಯಿತು. ತಾಲೂಕು ಕಾರ್ಯನಿರ್ವಾಹಣಾ ಅಧಿಕಾರಿ ಭವಾನಿ ಶಂಕರ್ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದೇ ವೇಳೆ ಮಾತನಾಡಿದ CITU ಸುಳ್ಯ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಪಿ ರಾಬರ್ಟ್ ಡಿಸೋಜಾ, ಅಕ್ಷರದಾಸೋಹ ಯಾವುದೇ ಕಾರಣಕ್ಕೂ ಖಾಸಗಿಕಾರಣ ಗೊಳಿಸಬಾರದು , ಮುಂದಿನ ದಿನಗಳಲ್ಲಿ ಬೇಡಿಕೆ ಹಿಡೇರಿಸದೆ ಇದ್ದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ( CITU) ಸುಳ್ಯ ತಾಲೂಕು ಅಧ್ಯಕ್ಷೆ ಲೀಲಾವತಿ, ಪ್ರಧಾನ ಕಾರ್ಯದರ್ಶಿ ಲೀಲಾವತಿ ಸುರ್ತಿಲ, ಉಪಾಧ್ಯಕ್ಷೆ ವಿಜಯ ಲಕ್ಷ್ಮಿ, ಸುನಿತಾ ಏಳಿಮಲೆ , ಲತಾ ಪದವು ಕಾರ್ಯದರ್ಶಿ ಸುಮಿತ ಕಲ್ಲುಗುಂಡಿ, ಕುಸುಮ ಕುಕ್ಕುಜಡ್ಕ, ಸಾವಿತ್ರಿ ಕರಂಬಿಲ, ಪುಷ್ಪ ಬಿ ಕೆ ಖಜಾಂಜಿ , ಸಮಿತಿ ಸದಸ್ಯರುಗಳಾದ್ ಹೇಮಾವತಿ ಬೆಳ್ಳಾರೆ, ಗಿರಿಜಾ ಏಳಿಮಲೆ , ಜಾನಕೀ ಪೆತ್ತಜೆ, ಹರೀನಾಕ್ಷಿ ಆರಂತೋಡು , ಚಂದ್ರವತಿ ಐವರ್ನಡು, ಕಮಲ ಅಡ್ಕರು, ಹರೀನಾಕ್ಷಿ ಬೆಳ್ಳಾರೆ, ಯಮುನಾ, ಚಂದ್ರಪ್ರಭಾ ಸುಳ್ಯ, ಭವ್ಯ ಎಡಮಂಗಿಲ ಹಾಗೂ ತಾಲೂಕಿ ಬಿಸಿಯೂಟ ಸಮಿತಿಯ ಸದಸ್ಯರು ಗಳು ಉಪಸ್ಥಿತರಿದ್ದರು

See also  ಸುಳ್ಯ: ಬಿಜೆಪಿಯೊಳಗೆ ಹೊತ್ತಿಕೊಂಡ ಆಂತರಿಕ ಬೆಂಕಿ, ವೆಂಕಟ್ ವಳಲಂಬೆ ಆಯ್ಕೆಯ ಬೆನ್ನಲ್ಲೇ ಏನಿದು ಅಸಮಾಧಾನ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget