ನ್ಯೂಸ್ ನಾಟೌಟ್: ಸರ್ಕಸ್ ಮಾಡುವುದು ಒಂದು ರೀತಿಯ ಮನರಂಜನೆಯಾಗಿದೆ. ಇದನ್ನು ಮಾಡಬೇಕಾದರೆ ಒಂದಷ್ಟು ತಯಾರಿಗಳನ್ನು ಮಾಡಿ ಮತ್ತೆ ಸಾಹಸಕ್ಕೆ ಕೈ ಹಾಕಬೇಕು. ಸರ್ಕಸ್ ಒಂದು ಕಲೆ ಎಂದು ಹೇಳಬಹುದು. ಇಲ್ಲೊಬ್ಬಳು ಸಾಮಾನ್ಯ ಹೆಣ್ಣು ಮಗಳು ಸರ್ಕಸ್ ಮಾಡುವ ಮೂಲಕ ಎಲ್ಲಾರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಹೌದು, ಈಕೆ ಯಾವುದೋ ಕಂಪನಿಯ ಕಡೆಯವಳು ಅಥವಾ ಯಾವುದೋ ದೊಡ್ಡ ತರಬೇತಿ ಕೇಂದ್ರದಲ್ಲಿ ಇದ್ದವಳೋ ಎಂದು ಭಾವಿಸಬೇಡಿ. ಇವಳು ಒಂದು ಸಣ್ಣ ಹಳ್ಳಿಯವಳು. ಕಲ್ಲಡ್ಕ ಪರಿಸರದ ಒಂದು ಸಾಮಾನ್ಯ ಕುಟುಂಬದ ಹೆಣ್ಣು ಮಗಳು ಇಂದು ಸರ್ಕಸ್ ಮಾಡಿ ಸಾಹಸ ಮೆರೆದಿದ್ದಾಳೆ. ಶ್ರೀರಾಮ ವಿದ್ಯಾಕೇಂದ್ರದ ಶಾಲಾ ಶಿಕ್ಷಕರಿಂದ ಒಂದಷ್ಟು ಮಟ್ಟಿನ ತರಬೇತಿ ಪಡೆದು, ಇನ್ನೊಂದಷ್ಟು ತನ್ನ ಸ್ವಂತ ಪರಿಶ್ರಮದಿಂದ ಸರ್ಕಸ್ ಮಾಡುವುದನ್ನು ಕಲಿತಿದ್ದಾಳೆ. ಗ್ರಾಮೀಣ ಮಕ್ಕಳಲ್ಲಿ ಇರುವ ಟ್ಯಾಲೆಂಟ್‌ಗೆ ಇದು ಒಂದು ಸಾಕ್ಷಿಯಾಗಿದೆ. ಹಳ್ಳಿಯ ಜನರಿಗೆ ಕಲಿಯಲು ಅವಕಾಶಗಳು ಸಿಗುವುದು ಕಮ್ಮಿ, ಆದರೂ ಸ್ವಲ್ಪ ಮಟ್ಟಿನ ತರಬೇತಿ ಸಿಕ್ಕರೂ ಕೂಡ ಅವರು ಯಾವ ಮಟ್ಟಕ್ಕೆ ಬೆಳೆಯುತ್ತಾರೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.