Latestಕ್ರೈಂರಾಜ್ಯವೈರಲ್ ನ್ಯೂಸ್

ಸಿನಿಮೀಯ ರೀತಿಯಲ್ಲಿ ಕೆನರಾ ಬ್ಯಾಂಕ್ ​ನಲ್ಲಿದ್ದ 58 ಕೆ.ಜಿ ಚಿನ್ನ ಕಳ್ಳತನ..! ಪೊಲೀಸರ ದಿಕ್ಕು ತಪ್ಪಿಸಲು ವಾಮಾಚಾರದ ನಾಟಕ..!

581

ನ್ಯೂಸ್ ನಾಟೌಟ್: ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದ್ದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಕದೀಮರ ಪತ್ತೆಗೆ ಪೊಲೀಸ್​ ಇಲಾಖೆ ಎಂಟು ವಿಶೇಷ ತಂಡಗಳು ರಚಿಸಿದೆ. ಬ್ಯಾಂಕ್ ​ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

ಕಳೆದ ತಿಂಗಳು ಮೇ 25 ರಂದು ವಿಜಯಪುರ ಜಿಲ್ಲೆ ಬಸನವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ​ನಲ್ಲಿ ಕಳ್ಳತನವಾಗಿತ್ತು. ಬ್ಯಾಂಕ್ ​ನಲ್ಲಿ ಕಳ್ಳತನವಾದ ಸುದ್ದಿ ತಿಳಿದು ಮನಗೂಳಿ ಪೊಲೀಸರು ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.

ಎಸ್ಪಿ ಲಕ್ಷ್ಮಣ ನಿಂಬರಗಿನೀಡಿರುವ ಮಾಹಿತಿ ಪ್ರಕಾರ, “6 ರಿಂದ 8 ಜನ ಕದೀಮರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಲಾಕರ್ ಓಪನ್ ತೆರೆಯಲು ಮತ್ತು ಸೈರನ್ ಬಂದ್​ ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ. ಬ್ಯಾಂಕ್ ಆವರಣದಲ್ಲಿದ್ದ ಸಿಸಿ ಕೆಮೆರಾಗಳನ್ನು ತಿರುಗಿಸಿದ್ದು ಹಾಗೂ ಸಿಸಿ ಕೆಮೆರಾ (ಎನ್​ವಿಆರ್) ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದಾರೆ . ಸತತ ಎರಡು ದಿನಗಳ ಕಾಲ ಸಂಚು ರೂಪಿಸಿ, ಪ್ಲ್ಯಾನ್ ಮಾಡಿ ಕೃತ್ಯವೆಸಲಾಗಿದೆ. ಕದೀಮರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು ತನಿಖೆ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.

ಕಳ್ಳತನ ಮಾಡಿದ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು, ಬ್ಯಾಂಕ್ ಪ್ರವೇಶ ದ್ವಾರದ ಕೀ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿದ್ದಾರೆ. ನಂತರ ಬ್ಯಾಂಕ್ ಕಿಟಕಿಯ ಸರಳುಗಳನ್ನು ಒಳಗಿನಿಂದಲೇ ಕಟ್ ಮಾಡಿ ಕಿಟಕಿ ಸರಳು ಕಟ್ ಮಾಡಿ ಒಳಗೆ ನುಗ್ಗಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ. ಅಲ್ಲದೆ, ಬ್ಯಾಂಕ್ ಒಳಗೆ ವಾಮಾಚಾರವಾಗಿದೆ ಎಂದು ಬಿಂಬಿಸಲು ಕಪ್ಪು ಬಟ್ಟೆಯ ಬೊಂಬೆ ಇಟ್ಟು ಪೂಜೆ ಮಾಡಿದ್ದಾರೆ ಎಂಬುವುದು ಕೂಡ ತನಿಖೆಯ ಗಮನ ಬೇರೆಡೆ ಸೆಳೆಯಲು ಎಂದು ಎಂಬುದು ತಿಳಿದುಬಂದಿದೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತನಿಖೆ ನಡೆಯುತ್ತಿದೆ.

ಭಾರತದ ಅಡಕೆ ಹಾಳೆ ತಟ್ಟೆಗಳು ಅಮೆರಿಕ‌ದಲ್ಲಿ ಬ್ಯಾನ್..! ಅತಿ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಂಡು ಸ್ಥಳೀಯ ಉದ್ಯಮಿಗಳು ಕಂಗಾಲು..!

ನಟ ಕಮಲ್ ಹಾಸನ್‌ ಗೆ ಕನ್ನಡ ಪುಸ್ತಕ ಉಡುಗೊರೆ ನೀಡಿದ `ಕನ್ನಡತಿ’ ಧಾರವಾಹಿ ಖ್ಯಾತಿಯ ನಟಿ ರಂಜನಿ..! ಇಲ್ಲಿದೆ ವೈರಲ್ ಪೋಸ್ಟ್

See also  ಉಮಾಪತಿ, ಪ್ರಥಮ್‍ ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಅರೆಸ್ಟ್..! ವಿಡಿಯೋ ಮಾಡಿ ಕ್ಷಮೆ ಕೇಳಿದ ಅಂಧಾಭಿಮಾನಿ..! ಬೆದರಿಕೆ ಹಾಕಿದ ಎಲ್ಲರ ವಿರುದ್ಧ ಕ್ರಮಕ್ಕೆ ಪೊಲೀಸರ ಸಿದ್ಧತೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget