ನ್ಯೂಸ್ ನಾಟೌಟ್: ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್, ತಮ್ಮ ‘ಹೌಸ್ಫುಲ್ 5’ ಸಿನಿಮಾದ ಶೋ ನಡೆಯುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಮುಂದೆ ಮಾಸ್ಕ್ ಒಂದನ್ನು ಧರಿಸಿಕೊಂಡು ಸಿನಿಮಾ ನೋಡಿ ಬಂದ ಪ್ರೇಕ್ಷಕರ ಮುಂದೆ ಮೈಕ್ ಹಿಡಿದು ಸಿನಿಮಾ ಇಷ್ಟವಾಯ್ತಾ? ಇಷ್ಟವಾದರೆ ಯಾವ ಅಂಶ ಇಷ್ಟವಾಯ್ತು, ಯಾವ ನಟ ಇಷ್ಟವಾದರು ಎಂಬಿತ್ಯಾದಿ ವಿಷಯಗಳನ್ನು ತನ್ನ ಧ್ವನಿ ಬದಲಿಸಿ ಮಾತನಾಡುವ ಮೂಲಕ ವಿಭಿನ್ನ ಪ್ರಯತ್ನ ಮಾಡಿದ್ದಾರೆ.
‘ಹೌಸ್ಫುಲ್ 5’ ಸಿನಿಮಾನಲ್ಲಿ ವಿಲನ್ ಧರಿಸಿರುವ ಮಾಸ್ಕ್ ಅನ್ನೇ ಅಕ್ಷಯ್ ಕುಮಾರ್ ಧರಿಸಿ ಜನರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಲವಾರು ಮಂದಿಯನ್ನು ಅಕ್ಷಯ್ ಕುಮಾರ್ ಅಭಿಪ್ರಾಯ ಕೇಳಿದ್ದಾರೆ. ಎಲ್ಲರೂ ಬಹುತೇಕ ಸಿನಿಮಾ ಚೆನ್ನಾಗಿದೆ, ಹಾಸ್ಯ ಚೆನ್ನಾಗಿದೆ ಎಂದಿದ್ದಾರೆ. ಯಾರಿಗೂ ಸಹ ತಮ್ಮ ಸಂದರ್ಶನ ಮಾಡುತ್ತಿರುವುದು ಸ್ವತಃ ಅಕ್ಷಯ್ ಕುಮಾರ್ ಎಂಬುದು ಗೊತ್ತಾಗಿಲ್ಲ.
ವಿಡಿಯೋ ಅನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ‘ಬಾಂದ್ರಾನಲ್ಲಿ ಜನರಿಂದಲೇ ನಮ್ಮ ‘ಹೌಸ್ಫುಲ್ 5’ ಸಿನಿಮಾದ ವಿಮರ್ಶೆ ಕೇಳಿದೆ, ಆರಂಭದಲ್ಲಿ ಯಾರೂ ಗುರುತು ಹಿಡಿಯಲಿಲ್ಲ ಆದರೆ ಕೆಲವರಿಗೆ ಗೊತ್ತಾಗಿ ಬಿಟ್ಟಿತು, ಎಲ್ಲರೂ ಮುತ್ತಿಕೊಳ್ಳುವ ಮೊದಲೇ ಅಲ್ಲಿಂದ ಪರಾರಿ ಆದೆ’ ಎಂದು ಬರೆದುಕೊಂಡಿದ್ದಾರೆ.
View this post on Instagram
‘ಹೌಸ್ಫುಲ್ 5’ ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ ಮುಖ್, ಜಾಕಿಶ್ರಾಫ್, ಸಂಜಯ್ ದತ್, ನಾನಾ ಪಾಟೇಕರ್, ಡಿನೊ ಮರಿಯೊ, ಜಾನಿ ಲಿವರ್, ರಾಜ್ಪಾಲ್ ಯಾದವ್, ಬೊಮನ್ ಇರಾನಿ, ಅರ್ಜುನ್ ರಾಮ್ಪಾಲ್, ಚಂಕಿ ಪಾಂಡೆ, ಸಂಜಯ್ ಮಿಶ್ರ, ಜಾಕ್ವೆಲಿನ್ ಫರ್ನಾಂಡೀಸ್, ಸೌಂದರ್ಯ ಶರ್ಮಾ, ಕೃತಿ ಕರಬಂಧ, ಸೋನಂ ಭಾಜ್ವಾ, ನೋರಾ ಫತೇಹಿ, ಸೋನಂ ಭಾಜ್ವಾ ಹೀಗೆ ಸುಮಾರು 20ಕ್ಕೂ ಹೆಚ್ಚು ಮಂದಿ ನಟಿಸಿದ್ದಾರೆ.
ಚಾಲಕನಿಲ್ಲದಾಗ ಮಕ್ಕಳಿದ್ದ ರಿಕ್ಷಾವನ್ನು ನ್ಯೂಟ್ರಲ್ ಮಾಡಿ ಹಿಂದೆ ತಳ್ಳಿದ ಯುವಕ..! ಪವಾಡವೆಂಬಂತೆ ಪಾರಾದ ಮಕ್ಕಳು..!
ತುರ್ತು ಆಂಗಾಂಗಗಳನ್ನು ರವಾನೆ ಮಾಡುವ ಮೂಲಕ 5 ಜನರ ಜೀವ ಉಳಿಸಿ ಭಾರತೀಯ ವಾಯುಸೇನೆ..! ಬೆಂಗಳೂರಿನಿಂದ ದೆಹಲಿಗೆ..!