Latest

ಚಲಿಸುತ್ತಿದ್ದ ಬೈಕ್ ಮೇಲೆಯೇ ಕಿಸ್ಸಿಂಗ್ -ಹಗ್ಗಿಂಗ್ !!ಸಿನಿಮಾ ಸ್ಟೈಲ್ ನಲ್ಲಿರುವ ಹಾಟ್‌ ರೋಮ್ಯಾನ್ಸ್ ಕಂಡು ನೆಟ್ಟಿಗರಿಂದ ಕ್ಲಾಸ್‌!ವಿಡಿಯೋ ವೈರಲ್

871

ನ್ಯೂಸ್‌ ನಾಟೌಟ್: ರಸ್ತೆ ಮೇಲೆ ವಾಹನಗಳಲ್ಲಿ ಚಲಿಸುವಾಗ ಎಷ್ಟು ಜಾಗರೂಕತೆ ಇದ್ದರೂ ಸಾಕಾಗಲ್ಲ.. ಇನ್ನು ರೋಮ್ಯಾನ್ಸ್ ಮಾಡುವವರು ಅದು ಯಾವ ಧೈರ್ಯದಲ್ಲಿ ರೋಡ್‌ ಮೇಲೆ ಹೋಗ್ತಾರೋ.. ಹೌದು, ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್ ನಲ್ಲಿ ಪ್ರೇಮಿಗಳು ರೋಮ್ಯಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದ ಘಟನೆ ಬೆಂಗಳೂರಿನ (Bengaluru) ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

ಬುಲೆಟ್ ಬೈಕ್ ನ (Bike) ಮೇಲಿರುವ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಹಾಡಹಗಲೇ ಹಗ್ಗಿಂಗ್, ಕಿಸ್ಸಿಂಗ್ ಮಾಡುತ್ತಾ, ನಡುರಸ್ತೆಯಲ್ಲಿಯೇ ಮೈ ಮರೆತು ಯುವಕ ಬೈಕ್ ಚಲಾಯಿಸಿದ್ದಾನೆ.

ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಇದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ಕರ್ನಾಟಕ ಪ್ರೋಟೋಫೊಲಿಯೋ ಎಂಬ ಪೇಜ್‍ನಿಂದ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ವಿಡಿಯೋ ಅಧಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇವರೇನೋ ಬೈಕ್ ನಲ್ಲಿ ಚಲಾಯಿಸೋದೇನೋ ಸರಿ, ಆದರೆ ರಸ್ತೆಯಲ್ಲಿ ಚಲಿಸುವ ಉಳಿದವರ ಪಾಡೇನು?ಅಕಸ್ಮಾತ್ ಪ್ರಜ್ಞೆಯಿಲ್ಲದೇ ಅಪಘಾತಗಳು ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಅನ್ನೋದನ್ನ ಯೋಚನೆ ಮಾಡಬೇಕಾಗಿದೆ.

See also  ಬೆಂಗಳೂರಿಗೆ ಆಗಮಿಸಿದ‌ ಉಪರಾಷ್ಟ್ರಪತಿ ಜಗದೀಪ್‌ ಧನಕರ್, ಬರಮಾಡಿಕೊಂಡ ರಾಜ್ಯಪಾಲರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget