ಕರಾವಳಿಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಸಿನಿಮಾ ಚಿತ್ರೀಕರಣದ ವೇಳೆ ಲೈಟ್ ಮ್ಯಾನ್ ಮೃತ್ಯು..! ಯೋಗರಾಜ್ ಭಟ್ ವಿರುದ್ಧ ದೂರು ದಾಖಲು..!

ನ್ಯೂಸ್ ನಾಟೌಟ್ : ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಈ ಸಂಬಂಧ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ವಿ.ಆರ್.ಎಲ್ ಗೋಡೌನ್ನಲ್ಲಿ ಈ ಅವಘಡ ಸಂಭವಿಸಿದ್ದು, ಲೈಟ್ ಮ್ಯಾನ್ ಮೋಹನ್ ಕುಮಾರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನೆಮಾದ ಶೂಟಿಂಗ್ ಅಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್ನಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದೆ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ 30 ಅಡಿ ಎತ್ತರದ ಅಲ್ಯೂಮಿನಿಯಂ ರೊಸ್ಟ್ರಮ್ ಮೇಲೇರಿ ಲೈಟ್ ಬಿಚ್ಚುತ್ತಿದ್ದಾಗ ಆಯಾತಪ್ಪಿ ಮೋಹನ್ ಕುಮಾರ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು(ಸೆ.6) ಮೃತಪಟ್ಟಿದ್ದಾರೆ.

Click

https://newsnotout.com/2024/09/ettina-hole-cm-siddaramayya-vartha-ilake-kannada-news/
https://newsnotout.com/2024/09/fishing-in-karavara-boat-under-storm-in-sea-kannada-news-malpe/
https://newsnotout.com/2024/09/muslim-kannada-news-biriyani-in-tiffin-box-school-principal/

Related posts

ಟಿಪ್ಪು ಸುಲ್ತಾನ್ ಖಡ್ಗ ಲಂಡನ್‌ನಲ್ಲಿ ಹರಾಜು! 2004 ರಲ್ಲಿ ಖರೀದಿಸಿದ್ದಕ್ಕಿಂತ ಮಲ್ಯ ಈ ಖಡ್ಗದ ಬಗ್ಗೆ ಹೇಳಿದ್ದೇನು? ಹರಾಜಾದ ಬೆಲೆ ಎಷ್ಟು?

ಉಪ್ಪಿನಂಗಡಿ: ಸರ್ಕಾರಿ ಜಮೀನಿನಲ್ಲಿ ಕಟ್ಟಿದ್ದ ಮನೆಯನ್ನು ಕೆಡವಿದ ಕಂದಾಯ ಅಧಿಕಾರಿಗಳು..! ಚಿತ್ರದುರ್ಗದಿಂದ ಬಂದು ನೆಲೆಸಿದ್ದ ವೃದ್ಧ ದಂಪತಿ

ಶಾಲೆ, ಕೆಫೆ ಆಯ್ತು ಈಗ ಕೇಂದ್ರ ಗೃಹ ಸಚಿವಾಲಯಕ್ಕೇ ಬಾಂಬ್ ಬೆದರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ