ಕ್ರೀಡೆ/ಸಿನಿಮಾವೈರಲ್ ನ್ಯೂಸ್ಸಿನಿಮಾ

ಸಿನಿಮಾದಲ್ಲಿ ನಟಿಸಲಿದ್ದಾರೆ ಡ್ರೋನ್‌ ಪ್ರತಾಪ್..! ಮೊದಲ ಚಿತ್ರದಲ್ಲೇ ಹೀರೋ ಆಗಿ ನಟನೆ

ನ್ಯೂಸ್ ನಾಟೌಟ್: ಬಿಗ್‌ ಬಾಸ್‌ ಸೀಸನ್‌ -10 ಮೂಲಕ ಖ್ಯಾತರಾದ ಡ್ರೋನ್‌ ಪ್ರತಾಪ್‌ (Drone Prathap) ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಪ್ರತಾಪ್‌ ತನ್ನ ಬುದ್ಧಿವಂತಿಕೆಯಿಂದ ಜನಮನ ಗೆದ್ದಿದ್ದರು.

ಬಿಗ್‌ ಬಾಸ್‌ ನಲ್ಲಿ ರನ್ನರ್‌ ಅಪ್‌ ಆದ ಬಳಿಕ ಅದರಲ್ಲಿ ಸಿಕ್ಕ ಬಹುಮಾನದ ಹಣವನ್ನು ಮಾನವೀಯ ಕಾರ್ಯಕ್ಕೆ ಪ್ರತಾಪ್‌ ಬಳಸಿದ್ದರು. ತಮಗೆ ಶೋ ಮೂಲಕ ಸಿಕ್ಕ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಫುಡ್‌ ಡೆಲಿವೆರಿ ಮಾಡುವ ಬಡ ಯುವಕನಿಗೆ ನೀಡಿದ್ದರು. ಜನುಮನ ದಿನದಂದು ಅಜ್ಜಿ ಸೇರಿದಂತೆ ಕೆಲ ಮಂದಿಗೆ ಕಣ್ಣಿನ ಆಪರೇಷನ್‌ ಮಾಡಿಸಿದ್ದರು. ಬಡ ಕುಟುಂಬಕ್ಕೆ ರೇಷನ್‌ ನೀಡಿದ್ದರು.

ಹೀಗೆ ಹತ್ತಾರು ಮಾನವೀಯ ಕಾರ್ಯದ ಮೂಲಕ ಪ್ರತಾಪ್‌ ಜನರ ಮನಸ್ಸು ಗೆಲ್ಲುತ್ತಾ ಬರುತ್ತಿದ್ದಾರೆ. ಇದೀಗ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

ಮಂಡ್ಯದ ಕೆ.ಆರ್ ಪೇಟೆಯ ಹನುಮಾನ್‌ ದೇವಸ್ಥಾನದ ಉದ್ಘಾಟನೆಗೆ ಅತಿಥಿಯಾಗಿ ಬಂದ ಅವರು, ಅಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಒಂದು ಸಿನಿಮಾಕ್ಕೆ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಇದೆಲ್ಲ ನಿಮ್ಮೆಲ್ಲರ ಆರ್ಶೀವಾದ. ನನ್ನ ಬ್ಯುಸಿನೆಸ್‌ ಜತೆಗೆ ಸಿನಿಮಾರಂಗಕ್ಕೂ ಕಾಲಿಡುತ್ತಿದ್ದೇನೆ” ಎಂದಿದ್ದಾರೆ.
ದೇವರ ಮುಂದೆ ಸಿನಿಮಾಕ್ಕೆ ಸಹಿ ಹಾಕಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

Click

https://newsnotout.com/2024/11/devotee-theft-the-saibaba-statue-kannada-news-f-temple/
https://newsnotout.com/2024/11/mahindra-thar-kannada-news-video-viral-online-viral-dd/
https://newsnotout.com/2024/11/vitla-kannada-news-panjigadde-nomore-kannada-news-f/
https://newsnotout.com/2024/11/vikram-gowda-encounter-dgp-warning-udupi-kannada-news-viral-news-d/
https://newsnotout.com/2024/11/belthangady-bike-case-issue-elephant-attack-viral-news/
https://newsnotout.com/2024/11/naxal-vikram-gowda-kannada-news-suddi-vikram-gowda-udupi/

Related posts

ಸಲ್ಮಾನ್ ಖಾನ್ ಹತ್ಯೆಯ ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯ್ ಸಹೋದರನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ..! ಈತನ ವಿರುದ್ಧ 18 ಪ್ರಕರಣಗಳು ದಾಖಲು..!

ಉತ್ತರ ಕನ್ನಡ ಕಡಲ ತೀರದಲ್ಲಿ ಚೀನಾ ಬೋಟ್..? ಗೂಢಚರ್ಯೆಯ ಅನುಮಾನ..!

ನೀವು ಅರಮನೆಗೆ ಬರಬೇಕಿಲ್ಲ ಎಂದು ಹೇಳಿದ್ದೇಕೆ ಯದುವೀರ್..? ಒಡೆಯರ್ ಪಕ್ಕ ಕುಳಿತು ಪಕ್ಕದಲ್ಲಿರುವವರಿಗೂ ದ್ರೋಹಮಾಡಲ್ಲ ಎಂದ ಪ್ರತಾಪ್ ಸಿಂಹ