Uncategorized

ತಾಯಿಯಾಗುವ ಸಿಹಿ ಸುದ್ದಿಯನ್ನು ಹಂಚಿಕೊಂಡ ಖ್ಯಾತ ನಟಿ ಅಮಲಾಪೌಲ್..!, ಮದುವೆಯಾದ ಎರಡೇ ತಿಂಗಳಿಗೆ 1+1=3 ಎಂದ ʻಹೆಬ್ಬುಲಿʼ ಅಭಿನೇತ್ರಿ

ನ್ಯೂಸ್ ನಾಟೌಟ್ : ಬಹುಭಾಷಾ ನಟಿ ಅಮಲಾ ಪೌಲ್ ಅವರು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಮಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಾವೂ ತಾಯಿಯಾಗುತ್ತಿರುವ ವಿಚಾರವನ್ನುನಟಿ ಹಂಚಿಕೊಂಡಿದ್ದು, ಇನ್‌ಸ್ಟಾದಲ್ಲಿ ನಟಿ ಬೇಬಿ ಬಂಪ್‌ ಫೋಟೊಶೂಟ್‌ವೊಂದನ್ನು ಶೇರ್‌ ಮಾಡೋದ್ರ ಮೂಲಕ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.

ನಟಿ ಅಮಲಾ ಪೌಲ್ ಅವರು ಕಳೆದ ನವೆಂಬರ್​ನಲ್ಲಿ ಎರಡನೇ ಮದುವೆಯಾಗಿದ್ದರು.ವಿವಾಹವಾದ 2 ತಿಂಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.ನಾವು ಒನ್ ಪ್ಲಸ್ ಒನ್ ಈಕ್ವಲ್ ತ್ರೀ (1+1=3) ಆಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮಲಯಾಳಂನ ಖ್ಯಾತ ನಟಿಯಾಗಿರುವ ಇವರು, ಸುದೀಪ್ ನಟನೆಯ ಕನ್ನಡದ ಸಿನಿಮಾ ‘ಹೆಬ್ಬುಲಿ’ಯಲ್ಲಿಯೂ ಅಮೋಘವಾಗಿ ಅಭಿನಯಿಸಿದ್ದರು.

ಅಮಲಾ ಪೌಲ್ (Amala Paul) ಅವರು ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದರು.ಇದಕ್ಕೂ ಮೊದಲು ಅಮಲಾ ಅವರು ನಿರ್ದೇಶಕ ಎ.ಎಲ್ ವಿಜಯ್ ಅವರನ್ನು ಜೂನ್ 2014 ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು. 2017 ರಲ್ಲಿ ಅಮಲಾ ಮತ್ತು ವಿಜಯ್ ವಿಚ್ಛೇದನ ಪಡೆದರು.ಜಗತ್ ದೇಸಾಯಿ ಅವರು ಉದ್ಯಮಿ ಆಗಿದ್ದಾರೆ. ಅಮಲಾ ಪೌಲ್ ಮುಖ್ಯವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹೆಬ್ಬುಲಿ (2017), ತಿರುಟ್ಟು ಪಯಲೆ 2 (2017), ರಾತ್ಸಾಸನ್ (2018), ಆದೈ (2019) ಮತ್ತು ದಿ ಟೀಚರ್ (2022) ನ ಭಾಗವಾಗಿದ್ದರು. ಅಮಲಾ ಕೊನೆಯದಾಗಿ ಭೋಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Related posts

25 ವರ್ಷದ ಯುವತಿಯ ಮದ್ವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆ

‘ಒಂದು ಮಳೆಬಿಲ್ಲು ಒಂದು ಮಳೆಮೋಡ’ ಹಾಡಿದ್ದ ಪ್ರಸಿದ್ಧ ಗಾಯಕನಿಗೆ ನಿಶ್ಚಿತಾರ್ಥ..!,ಬಹುಕಾಲದ ಗೆಳತಿ ಆಶ್ನಾ ಜತೆ ಅರ್ಮಾನ್ ಮಲಿಕ್ ಎಂಗೇಜ್

ಕರ್ನಾಟಕದ ಸಿಂಗಂ,ಬಿಜೆಪಿ ನಾಯಕ ಇನ್ಮುಂದೆ ನಟ..!ಗಮನ ಸೆಳೆದ ಅಣ್ಣಾಮಲೈ ನಟನೆಯ ಅರಬ್ಬೀ ಚಿತ್ರದ ಟ್ರೈಲರ್..!