ಕರಾವಳಿಕ್ರೀಡೆ/ಸಿನಿಮಾ

ಕಾಂತಾರದ ಮೂಗುತಿ ಸುಂದರಿ ನಟನೆಯ ಬಾಲಿವುಡ್‌ ಸಿನಿಮಾ ತೆರೆಗೆ ಬರಲು ಸಜ್ಜು,ನಟಿ ಸಪ್ತಮಿ ಗೌಡ ಚೊಚ್ಚಲ ಹಿಂದಿ ಸಿನಿಮಾ ಹೇಗಿರಲಿದೆ ಗೊತ್ತಾ?

ನ್ಯೂಸ್ ನಾಟೌಟ್ : ಕಾಂತಾರ ಇಡೀ ವಿಶ್ವದಲ್ಲೇ ಗಮನ ಸೆಳೆದ ಸಿನಿಮಾ.ಈ ಚಿತ್ರದಲ್ಲಿ ನಟ ರಿಷಬ್ ಶೆಟ್ಟಿ ಯವರ ಅಭಿನಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿತ್ತು.ಅದರಲ್ಲೂ ಲೀಲಾ ಪಾತ್ರದಲ್ಲಿ ಕಾಣಿಸಿಕೊಂಡ ಸಹಜ ಸುಂದರಿ ಸಪ್ತಮಿ ಗೌಡ ಆಕೆಯ ಸರಳತೆಗೆ ಭಾರಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಇದೀಗ ಸಿನಿಪ್ರಿಯರ ಮನಗೆದ್ದಿರುವ ನಟಿ ಬಾಲಿವುಡ್ ರಿಲೀಸ್‌ ನತ್ತ ಚಿತ್ತ ನೆಟ್ಟಿದ್ದಾರೆ.

ಹೌದು, “ಕಾಂತಾರ’ ಹಿಟ್‌ ಬಳಿಕ ನಟಿ ಸಪ್ತಮಿ ಗೌಡಗೆ ಹಲವಾರು ಸಿನಿಮಾ ಆಫರ್ ಗಳು ಬಂದಿದ್ದವು.ಕೇವಲ ಕನ್ನಡ ಮಾತ್ರವಲ್ಲ.ಇದೀಗ ಹಿಂದಿ ಸಿನಿಮಾದಲ್ಲಿಯೂ ಆಫರ್ ಬಂದಿದ್ದು,ಅದನ್ನು ಒಪ್ಪಿ ಅಭಿನಯಿಸಿದ್ದರು. ಚಿತ್ರದ ಹೆಸರು “ದಿ ವಾಕ್ಸಿನ್‌ ವಾರ್‌’.

“ಕಾಶ್ಮೀರಿ ಫೈಲ್ಸ್‌’ ಮೂಲಕ ಸಂಚಲ ಸೃಷ್ಟಿಸಿರುವ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ “ದಿ ವ್ಯಾಕ್ಸಿನ್‌ ವಾರ್’ ಚಿತ್ರದಲ್ಲಿ ಸಪ್ತಮಿ ಗೌಡ ಕೂಡಾ ನಟಿಸಿದ್ದಾರೆ. ಇದು ಅವರ ಚೊಚ್ಚಲ ಹಿಂದಿ ಚಿತ್ರ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆ.28ರಂದು ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೇಲೆ ಸಪ್ತಮಿ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಾಂತಾರ ಸಿನಿಮಾದ ನಂತರ ಇದೀಗ ಈ ಚಿತ್ರದಲ್ಲಿಯೂ ಮಿಂಚಲಿರುವ ನಟಿ ಒಂದೊಳ್ಳೆ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.ಇದು ನೈಜ ಘಟನೆಗಳನ್ನು ಆಧರಿಸಿ ಮಾಡಲಾಗಿರುವ ಚಿತ್ರ. ಮುಖ್ಯವಾಗಿ ಕೋವಿಡ್‌ ಸಮಯದಲ್ಲಿನ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಅನುಪಮ್‌ ಖೇರ್‌, ನಾನಾ ಪಾಟೇಕರ್‌ ಪ್ರಮುಖ ಪಾತ್ರ ಮಾಡಿದ್ದಾರೆ.

Related posts

ಈ ಆಟ ಆಡುವವರು ಡೈಪರ್ ಹಾಕಿಕೊಳ್ಳಲೇ ಬೇಕೆಂದು ಹೇಳಿದ್ದೇಕೆ? ಈ ಗೇಮ್ ನಲ್ಲಿ ಅಂಥದ್ದೇನಿದೆ? ವೈರಲ್ ವಿಡಿಯೋ ವೀಕ್ಷಿಸಿ..

ಪುತ್ತೂರು: ಸಂಜೀವ ಮಠಂದೂರು ವಿರುದ್ಧ ಅವಹೇಳನಕಾರಿಯಾಗಿ ಬೆದರಿಕೆ ಪೋಸ್ಟ್..! ಮಾಜಿ ಶಾಸಕನಿಂದ ಯುವಕನ ವಿರುದ್ದ ದೂರು ದಾಖಲು

ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ ಎಂದದ್ದೇಕೆ? ಪೊಲೀಸರ ಮುಂದೆ ನಟ ದರ್ಶನ್ ಕೊಟ್ಟ ಹೇಳಿಕೆಯೇನು?