ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬದುಕನ್ನು ಬಯೋಪಿಕ್ (Biopic) ಸಿನಿಮಾ ರೂಪದಲ್ಲಿ ಬರಲು ಸಜ್ಜಾಗಿದೆ. ಚಿತ್ರದ ಮೊದಲ ಪೋಸ್ಟರ್ ಕೂಡ ಅನಾವರಣ ಮಾಡಲಾಗಿದೆ.
‘ಅಜೇಯ್: ದಿ ಅನ್ ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’ (Ajey: The Untold Story of a Yogi) ಎಂಬ ಟೈಟಲ್ ಅನ್ನು ಸಿನಿಮಾಗೆ ಇಡಲಾಗಿದೆ. ಈ ಚಿತ್ರವು ಶಾಂತನು ಗುಪ್ತ ಎಂಬವರ ‘ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್’ ಎಂಬ ಪುಸ್ತಕವನ್ನು ಆಧರಿಸಿದೆ ಎನ್ನಲಾಗಿದೆ.
ರಿಲೀಸ್ ಆದ ಪೋಸ್ಟರ್ ನಲ್ಲಿ ನಟ ಅನಂತ್ ಜೋಶಿ ಯೋಗಿ ಆದಿತ್ಯನಾಥ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ವರ್ಷವೇ ಸಿನಿಮಾ ರಿಲೀಸ್ ಗೆ ಚಿತ್ರತಂಡ ತಯಾರಿ ನಡೆಸಿದೆ.
View this post on Instagram
ಇದು ಹಳ್ಳಿಯ ಮಧ್ಯಮ ವರ್ಗದ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುವ ಕಥೆಯನ್ನು ತೋರಿಸಲಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ ಅನಂತ್ ಜೋಶಿ ಜೊತೆ ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್, ಪವನ್ ಮಲ್ಹೋತ್ರಾ ಸೇರಿದಂತೆ ಅನೇಕರು ನಟಿಸಿದ್ದಾರೆ.
ಇದನ್ನೂ ಓದಿ:ನಿತ್ಯಾನಂದನ ಕೈಲಾಸ ದೇಶದ 20 ಪ್ರಜೆಗಳು ಗಡೀಪಾರು..! ಅಕ್ರಮವಾಗಿ ಭೂ ಸ್ವಾಧೀನಕ್ಕೆ ಪ್ರಯತ್ನ..!
View this post on Instagram