ಕ್ರೀಡೆ/ಸಿನಿಮಾ

ನಟಿ ಸಾಯಿಪಲ್ಲವಿಗೆ ದಿಢೀರ್ ಮದುವೆ,ಪಡ್ಡೆ ಹುಡುಗರು ಶಾಕ್ ..!ಸೈಲೆಂಟಾಗಿ ಖ್ಯಾತ ನಿರ್ದೇಶಕನನ್ನು ಮದುವೆಯಾಗಿದ್ದೇಕೆ?

ನ್ಯೂಸ್ ನಾಟೌಟ್ :ನ್ಯಾಚುರಲ್‌ ಬ್ಯೂಟಿ ಎಂದೇ ಹೆಸರಾಗಿರುವ ಸಾಯಿ ಪಲ್ಲವಿ ಯಾರಿಗೂ ತಿಳಿಸದೆ ಸರಳವಾಗಿ ತಮಿಳಿನ ಖ್ಯಾತ ನಿರ್ದೇಶಕನನ್ನು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.ಇದಕ್ಕೆ ಸಾಕ್ಷಿಯೆಂಬಂತೆ ಫೋಟೋಗಳು ಕೂಡ ಇದೀಗ ಬಾರಿ ವೈರಲ್ ಆಗುತ್ತಿದೆ.

ಆಕೆಯ ವೈವಾಹಿಕ ಜೀವನದ ಕುರಿತಾದ ಊಹಾಪೋಹಗಳು ಹರಿದಾಡುತ್ತಲೇ ಇತ್ತು. ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ವದಂತಿಗಳು ಆಕೆಯ ಬಗ್ಗೆ ಕೇಳಿತ್ತು. ಆದರೂ ಈ ಪೋಟೋವನ್ನು ಪಡ್ಡೆ ಹುಡುಗರು ಶಾಕ್ ಗೊಳಗಾಗೋದು ಗ್ಯಾರಂಟಿ..

ನಟಿ ಸಾಯಿ ಪಲ್ಲವಿ ಅವರು ನಿಮ್ಗೆ ತಿಳಿದಿರೋ ಹಾಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಪ್ರತಿಭಾವಂತ ನಟಿ.ಅವರ ನೃತ್ಯಕ್ಕೆ ಮನಸೋಲದವರೇ ವಿರಳ.ಪಡ್ಡೆ ಹುಡುಗರ ನಿದ್ದೆ ಕೆಡಿಸಿರೋ ಸಹಜ ಸುಂದರಿ. ಆಕೆಯ ನೈಸರ್ಗಿಕ ಸೌಂದರ್ಯ, ಆಕರ್ಷಕವಾದ ನೃತ್ಯ ಕೌಶಲ್ಯಗಳು ಮತ್ತು ಬಹುಮುಖ ನಟನಾ ಸಾಮರ್ಥ್ಯಗಳು ಆಕೆಗೆ ಅವಕಾಶಗಳು ಮತ್ತು ಅಭಿಮಾನಿಗಳನ್ನೇ ಸೃಷ್ಟಿಸಿದವು.

ಮದುವೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಸಾಯಿ ಪಲ್ಲವಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಚಿತ್ರವು ನಟ ರಾಜ್‌ಕುಮಾರ್ ಪೆರಿಯಸಾಮಿ ಅವರೊಂದಿಗೆ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಯಿತು. ಇದನ್ನು ಕಂಡು ಸಾಯಿ ಪಲ್ಲವಿ ಫ್ಯಾನ್ಸ್ ದಂಗಾಗಿದ್ದಾರೆ. ಯಾರಿಗೂ ಹೇಳದೇ ಸಾಯಿ ಪಲ್ಲವಿ ಮದುವೆಯಾಗ್ಬಿಟ್ರಾ ಅನ್ನುವ ಗೊಂದಲ ಶುರುವಾಯಿತು.

ಅಂದ ಹಾಗೆ ಇದರ ಸತ್ಯಾಸತ್ಯತೆ ತಿಳಿಯೋದಾದ್ರೆ  ಸಾಯಿಪಲ್ಲವಿ ಅವರು ಮುಂಬರುವ ಚಿತ್ರಕ್ಕಾಗಿ ರೆಡಿಯಾಗಿದ್ದಾರೆ. ಮುಂಬರುವ ಚಿತ್ರ SK21 ಮುಹೂರ್ತ ಸಮಾರಂಭದಲ್ಲಿ ತೆಗೆದ ಈ ಚಿತ್ರ ಅವರೇ ಮದುವೆಯಾದಂತೆ ಭಾರಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಪಲ್ಲವಿ ಶಿವಕಾರ್ತಿಕೇಯನ್ ಅವರೊಂದಿಗೆ ನಟಿಸಿದ್ದಾರೆ.

ಇದು ನಿಜವಾದ ಮದುವೆಯ ಛಾಯಾಚಿತ್ರವಲ್ಲ ಬದಲಿಗೆ ಚಿತ್ರದ ಮುಹೂರ್ತ ಸಮಾರಂಭದ್ದು ಎಂದು ಸ್ಪಷ್ಟಪಡಿಸಿ,ಫೋಟೋ ಹಂಚಲಾಗಿದೆ.ಈ ಫೋಟೋ ಹಂಚುತ್ತಿದ್ದಂತೆ ಮಿಂಚಿನಂತೆ ಪೋಟೋ ಹರಿದಾಡಿದೆ.ಇನ್ನೂ ಕೆಲವರು ಈ ಫೋಟೋ ನೋಡುತ್ತಾ ಅಬ್ಬಾ ನಿಜವಾದ ಮದುವೆಯಲ್ವಲ್ವ ಎಂದು ಸಮಾಧಾನ ಪಟ್ಟುಕೊಂಡ್ರು.

ಅಂದ ಹಾಗೆ ಹೂಮಾಲೆಗಳನನ್ನು ಬಳಸುವುದು ದಕ್ಷಿಣ ಭಾರತದ ಚಲನಚಿತ್ರ ಬಿಡುಗಡೆ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಪದ್ದತಿಯಾಗಿದೆ.ಹೀಗಾಗಿ ಈ ಪದ್ಧತಿಯನ್ನು ಅನುಸರಿಸಿದ್ದಾರೆ ವಿನಃ ಇದು ನಿಜವಾದ ಮದುವೆಯಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ.

ತಮಿಳುನಾಡಿನಲ್ಲಿ ಮೇ 9, 1992 ರಂದು ಜನಿಸಿದ ಸಾಯಿ ಪಲ್ಲವಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ಭಾರತೀಯ ಚಲನಚಿತ್ರ ನಟಿ. ತನ್ನ ಎಂಬಿಬಿಎಸ್ ಪೂರ್ಣಗೊಳಿಸಿದ್ದರೂ, ನಟಿ ನೃತ್ಯ ಮತ್ತು ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. 

ಸಾಯಿ ಪಲ್ಲವಿ ಅವರ ಬಾಲ್ಯದಲ್ಲಿ ತಮಿಳು ಚಲನಚಿತ್ರಗಳಾದ “ಕಸ್ತೂರಿ ಮಾನ್” (2005) ಮತ್ತು “ಧಾಮ್ ಧೂಮ್” (2008) ನಲ್ಲಿ ಬಾಲ ಕಲಾವಿದೆಯ ಪಾತ್ರಗಳೊಂದಿಗೆ ಚಲನಚಿತ್ರೋದ್ಯಮಕ್ಕೆ ಪ್ರಯಾಣ ಪ್ರಾರಂಭವಾಯಿತು. 2019 ರಲ್ಲಿ, ಸಾಯಿ ಪಲ್ಲವಿ ಫೇರ್‌ನೆಸ್ ಕ್ರೀಮ್ ಜಾಹೀರಾತಿಗಾಗಿ 2 ಕೋಟಿ ಆಫರ್ ಅನ್ನು ನಿರಾಕರಿಸಿದರು.

ಸೌಂದರ್ಯವರ್ಧಕಗಳ ಸೀಮಿತ ಬಳಕೆಯಿಂದಾಗಿ ಬ್ರ್ಯಾಂಡ್ ಅನ್ನು ಅನುಮೋದಿಸುವ ಅವಕಾಶವನ್ನು ತಿರಸ್ಕರಿಸಿದರು. 2020 ರ ಫೋರ್ಬ್ಸ್ ಇಂಡಿಯಾದ  30 ವರ್ಷದೊಳಗಿನ 30 ಜನರ ಪಟ್ಟಿಯಲ್ಲಿ ಸೇರಿರುವ ಏಕೈಕ ನಟಿ ಎಂಬ ಹೆಗ್ಗಳಿಕೆಯನ್ನು ಸಾಯಿ ಪಲ್ಲವಿ ಸಾಧಿಸಿದ್ದಾರೆ.ಹೆಚ್ಚುವರಿಯಾಗಿ, ಅವರು 2021 ರ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ Instagram ತಾರೆಗಳ ಪಟ್ಟಿಯಲ್ಲಿ 20 ನೇ ಸ್ಥಾನವನ್ನು ಪಡೆದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇

https://www.facebook.com/NewsNotOut2023/videos/746971337194551/?extid=WA-UNK-UNK-UNK-AN_GK0T-GK1C&mibextid=RUbZ1f

Related posts

ಮಾರ್ಟಿನ್ ಚಿತ್ರದ ರಿವ್ಯೂ ಮಾಡಿದ್ದ ರೀಲ್ಸ್ ಸ್ಟಾರ್ ಗೆ ನಟ ಧ್ರುವ ಸರ್ಜಾ ಅಭಿಮಾನಿಗಳಿಂದ ತರಾಟೆ..! ಕ್ಷಮೆ ಯಾಚಿಸಿದ ಕಿರುಚಿತ್ರ ನಟ..! ಇಲ್ಲಿದೆ ವೈರಲ್ ವಿಡಿಯೋ

ಶಿಲ್ಪಾ ಶೆಟ್ಟಿ ತಂಗಿಗೆ ಏನಿದು ವಿಚಿತ್ರ ಕಾಯಿಲೆ..! ಕಣ್ಣೀರಿಟ್ಟ ನಟಿ ಹೇಳಿದ್ದೇನು..? ಇಲ್ಲಿದೆ ವಿಡಿಯೋ

ಪುನೀತ್‌ ರಾಜ್‌ಕುಮಾರ್‌ ಪ್ರೇರಣೆ,ಅಪ್ಪು ಹುಟ್ಟುಹಬ್ಬದಂದು ಮಹತ್ವದ ನಿರ್ಧಾರ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ..! ಅಂಧ ಮಗುವನ್ನು ದತ್ತು ಪಡೆದ ವಿನಯ್ ಗೌಡ..!