ಕ್ರೈಂವೈರಲ್ ನ್ಯೂಸ್

ಮಾಲೆ ಧರಿಸಿ 41 ದಿನಗಳ ವೃತ ಕೈಗೊಂಡ ಪಾದ್ರಿಗೀಗ ಸಂಕಷ್ಟ..! ಮಾಲೆ ಧರಿಸಿ ಶಬರಿಮಲೆಗೆ ಹೋಗಲು ಚರ್ಚ್ ನಿರಾಕರಿಸಿದ್ದೇಕೆ? ಪಾದ್ರಿ ಕೆಲಸ ತೊರೆದರಾ ಆ ವ್ಯಕ್ತಿ?

314

ನ್ಯೂಸ್ ನಾಟೌಟ್: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಕ್ರಿಶ್ಚಿಯನ್‌ ಪಾದ್ರಿಯೊಬ್ಬರು ಚರ್ಚ್‌ನಲ್ಲಿ ಕೆಲಸ ಮಾಡಲು ನೀಡಿದ್ದ ಪರವಾನಗಿಯನ್ನು ಹಿಂತಿರುಗಿಸಿ , ಕೆಲಸ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ.

‘ಶಬರಿಮಲೆಗೆ ಮಾಲೆ ಹಾಕಿರುವ ನಿರ್ಧಾರದ ಬಗ್ಗೆ ಚರ್ಚ್‌ನ ಆಡಳಿತವು ನನ್ನನ್ನು ಪ್ರಶ್ನಿಸಿ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ವಿವರಣೆಯನ್ನು ನೀಡಿ ಎಂದು ಕೇಳಿತ್ತು. ವಿವರಣೆ ನೀಡುವ ಬದಲು ಪಾದ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ನೀಡಿದ್ದ ಪರವಾನಗಿ ಮತ್ತು ಐಡಿ ಕಾರ್ಡ್‌ನ್ನು ವಾಪಸ್‌ ನೀಡಿದ್ದೇನೆ’ ಎಂದು ರೇವ್‌ ಪಿಟಿಐಗೆ ತಿಳಿಸಿದ್ದಾರೆ.

ಮಾಲೆ ಧರಿಸಿ 41 ದಿನಗಳ ವೃತ ಕೈಗೊಂಡು ಶಬರಿಮಲೆಯ ಅಯ್ಯಪ್ಪ ದೇವರ ದರ್ಶನ ಪಡೆಯಲು ಕೇರಳದ ‘ರೇವ್‌ ಮನೋಜ್‌ ಕೆ.ಜಿ’ ಎನ್ನುವ ಪಾದ್ರಿ ಆಂಗ್ಲಿಕನ್‌ ಚರ್ಚ್‌ ಆಫ್‌ ಇಂಡಿಯಾ ಅಡಿಯಲ್ಲಿ ಬರುವ ಚರ್ಚ್‌ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

‘ನಾನು ಚರ್ಚ್‌ನ ಸಿದ್ಧಾಂತಗಳಿಗೆ ತಕ್ಕಂತೆ ಕೆಲಸ ಮಾಡುವವನಲ್ಲ, ದೇವರ ಸಿದ್ಧಾಂತವನ್ನು ಅಳವಡಿಸಿಕೊಂಡವನು, ದೇವರು ಜಾತಿ, ಧರ್ಮ, ನಂಬಿಕೆಯನ್ನು ಲೆಕ್ಕಿಸದೆ ಪ್ರೀತಿ ಮಾಡು ಎನ್ನುತ್ತಾರೆ. ಹೀಗಿದ್ದಾಗ ಚರ್ಚ್‌ಅನ್ನು ಪ್ರೀತಿಸಬೇಕೋ ಅಥವಾ ದೇವರನ್ನೊ ಎನ್ನುವ ನಿರ್ಧಾರ ನಿಮಗೆ ಬಿಟ್ಟಿದ್ದು‘ ಎಂದು ಹೇಳಿದ್ದಾರೆ.

ರೇವ್‌ ಪಾದ್ರಿಯಾಗುವುದಕ್ಕಿಂತ ಮುನ್ನ ಸಾಪ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು ಎಂದು ವರದಿ ತಿಳಿಸಿದೆ. ಈ ಬಗ್ಗೆ ಚರ್ಚ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

See also  ನಾನು ಮೋಸ ಮಾಡಿದ್ದೇನೆ ಎಂದು ಒಪ್ಪಿಕೊಂಡ ನಟ ನಾಗಜೈತನ್ಯ..! ಸಮಂತಾ ಸಂಬಂಧದ ಬಗ್ಗೆ ಹೇಳಿದ್ರಾ ನಟ..? ವ್ಯಾಪಕ ಟೀಕೆಗೆ ಗುರಿಯಾದ ಹೇಳಿಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget