Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಚಾಕೊಲೇಟ್​ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ..! ಇಟ್ಟಿಗೆಯಿಂದ ಹೊಡೆದು, ಬಾಯಿಗೆ ಎಲೆಗಳನ್ನು ತುರುಕಿದ್ದ ಕಿರಾತಕ..!

609

ನ್ಯೂಸ್‌ ನಾಟೌಟ್‌: ಚಾಕೊಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಪಕ್ಕದ ಮನೆಯ ವ್ಯಕ್ತಿ ಬಾಲಕಿಗೆ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ಇಟ್ಟಿಗೆಯಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಮಂಗಳವಾರ(ಜೂ.3) ಸಂಜೆ ಕಾನ್ಪುರ ನಗರ ಜಿಲ್ಲೆಯ ಘಟಂಪುರದಲ್ಲಿ ಈ ಘಟನೆ ನಡೆದಿದೆ.

ಸಂಜೆ 5.30 ರ ಸುಮಾರಿಗೆ ಬಾಲಕಿ ಹತ್ತಿರದ ಅಂಗಡಿಗೆ ಹೋಗಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ. ಅಂಗಡಿಯ ಬಳಿ, ಅದೇ ಪ್ರದೇಶದ ಯುವಕನೊಬ್ಬ ಬಾಲಕಿ ಬಳಿ ಚಾಕೊಲೇಟ್​ ಕೊಡಿಸುವುದಾಗಿ ಹೇಳಿ ಅಂಗಡಿಯ ಹಿಂದಿನ ಪೊದೆಯೊಳಗೆ ಕರೆದೊಯ್ದಿದ್ದ. ಬಾಲಕಿ ನೋವಿನಿಂದ ಕಿರುಚಿದಾಗ, ಆರೋಪಿ ಆಕೆಯ ಬಾಯಿಯೊಳಗೆ ಎಲೆಗಳನ್ನು ತುರುಕಿದ್ದಾನೆ.

ಆಕೆ ಅಳುತ್ತಲೇ ಇದ್ದಳು. ಆ ವ್ಯಕ್ತಿ ಹತ್ತಿರದಲ್ಲಿ ಇರಿಸಲಾಗಿದ್ದ ಇಟ್ಟಿಗೆಯಿಂದ ಆಕೆಗೆ ಹಲವಾರು ಬಾರಿ ಹೊಡೆದು ಬಾಲಕಿಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ ಬಾಲಕಿಯ ತಂದೆ, ನನ್ನ ಮಗಳು ಸಂಜೆ 5.30 ರ ಸುಮಾರಿಗೆ ಹತ್ತಿರದ ಅಂಗಡಿಗೆ ಹೋಗಿದ್ದಳು. 10 ರಿಂದ 15 ನಿಮಿಷಗಳಾದರೂ ಆಕೆ ಹಿಂತಿರುಗದಿದ್ದಾಗ, ಅವಳ ತಾಯಿ ಆಕೆಯನ್ನು ಹುಡುಕಲು ಹೋಗಿದ್ದಳು.

ಅಂಗಡಿಯವರನ್ನು ಕೇಳಿದಾಗ, ನಮ್ಮ ಮಗಳು ಅಲ್ಲಿಗೆ ಹೋಗಿಲ್ಲ ಎಂದು ತಿಳಿಸಿದ್ದಾರೆ. ನನ್ನ ಮಗಳು ಅಂಗಡಿಯನ್ನು ತಲುಪಲೇ ಇಲ್ಲ. ನಮ್ಮ ಪ್ರದೇಶದ ಒಬ್ಬ ವ್ಯಕ್ತಿ ಅವಳನ್ನು ಎತ್ತಿಕೊಂಡು ಮಾರುಕಟ್ಟೆ ಪ್ರದೇಶದ ಹಿಂದೆ, ಪೊದೆಗಳ ಹಿಂದೆ ಕರೆದೊಯ್ದಿದ್ದ ಎಂಬುದು ಬಳಿಕ ತಿಳಿದುಬಂದಿದೆ.

ಆರೋಪಿ ತಮ್ಮ ಪಕ್ಕದ ಮನೆಯ ಹುಡುಗ, ಯಾವುದೇ ದ್ವೇಷವಿಲ್ಲ, ಯಾವುದೇ ನೆರೆಹೊರೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮಾತ್ರ ಇದ್ದವು. ಆತನ ಪೋಷಕರೇ ಆತನಿಗೆ ಹೀಗೆ ಮಾಡೆಂದು ಹೇಳಿಕೊಟ್ಟಿರಬಹುದು ಎಂದು ಬಾಲಕಿ ತಂದೆ ಆರೋಪಿಸಿದ್ದಾರೆ.

ತನ್ನ ಮಗಳು ಈ ಹಲ್ಲೆಯಿಂದ ಬದುಕುಳಿಯುತ್ತಾಳೋ ಇಲ್ಲವೋ ಎಂಬುದು ಖಚಿತವಿಲ್ಲ,ಆಕೆ ಸ್ಥಿತಿ ನೋಡಿದರೆ ಆಕೆ ಬದುಕುಳಿದಿದ್ದೇ ಪವಾಡ. ಇದು ಆಕೆಯ ಮೇಲೆ ನಡೆದ ಹತ್ಯೆ ಪ್ರಯತ್ನವಾಗಿತ್ತು ಎಂದಿದ್ದಾರೆ. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಕಾನ್ಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ದೇಶದ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿಯಾಗಿ ನೇಮಕ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ತಂದೆ-ಮಗ ನಿಗೂಢವಾಗಿ ಸಾವು, ಮನೆಯ ಅಂಗಳದಲ್ಲಿಯೇ ಶವವಾಗಿ ಪತ್ತೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget