ಕ್ರೈಂದೇಶ-ಪ್ರಪಂಚ

81 ರ ವ್ಯಕ್ತಿಯಿಂದ 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ! ಚಾಕಲೇಟ್ ಆಮಿಷ ಒಡ್ಡಿ ಆತ ಮಾಡಿದ ನೀಚ ಕೃತ್ಯದ ಬಗ್ಗೆ ತಿಳಿದದ್ದೇ ರೋಚಕ!

ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 81 ವರ್ಷದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ. ಶುಕ್ರವಾರ ಸಂಜೆ ಗಜೋಲ್ ಪ್ರದೇಶದ ಬಳಿ ಈ ಘಟನೆ ನಡೆದಿದೆ.

ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆರೋಪಿ ಬಂಕಿಮ್ ಚಂದ್ರ ರಾಯ್ ಎಂಬಾತ ಆಕೆಗೆ ಚಾಕೊಲೇಟ್ ಕೊಡಿಸಿ ಆಮಿಷ ಒಡ್ಡಿದ್ದ ಎನ್ನಲಾಗಿದೆ. ಇಂತಹದ್ದೇ ಘಟನೆ ಈ ಮುಂಚೆಯೂ ವರದಿಯಾಗಿದ್ದು ಅದರಲ್ಲಿ ಬಾಲಕಿಯನ್ನು ಸಂಬಂಧಿಯೊಬ್ಬ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು ಎಂದು ವರದಿಯಾಗಿತ್ತು.

ಆದರೆ ಇಲ್ಲಿ, ರಾಯ್ ಎಂಬಾತ ಬಾಲಕಿಯನ್ನು ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದ್ದು, ಬಾಲಕಿ ತನ್ನ ಖಾಸಗಿ ಅಂಗಗಳಲ್ಲಿ ನೋವಿಯುತ್ತಿದೆ ಎಂದು ಅಳುತ್ತಾ ತನ್ನ ಹೆತ್ತವರ ಬಳಿಗೆ ಹಿಂತಿರುಗಿದ್ದಾಳೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬದವರು ಗಜೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ.

“ನನ್ನ ಮಗಳು ಬೆನಿಯಾಲ್ ಮೋರ್ ಬಳಿ ದಿನಸಿ ಅಂಗಡಿ ಮತ್ತು ವೈದ್ಯರ ಚೇಂಬರ್ ಬಳಿ ಮೈದಾನದಲ್ಲಿ ಆಟವಾಡುತ್ತಿದ್ದಾಗ ಬಂಕಿಮ್ ಚಂದ್ರ ರಾಯ್ ಆಕೆಗೆ ಚಾಕೊಲೇಟ್ ಆಮಿಷವೊಡ್ಡಿ ಆಕೆಯನ್ನು ಕೆಟ್ಟ ಉದ್ದೇಶದಿಂದ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ” ಎಂದು ಸಂತ್ರಸ್ತೆಯ ತಂದೆ ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ರಾಯ್ ಅವರನ್ನು ಸಂತ್ರಸ್ತೆಯ ಮನೆಯ ಸಮೀಪದಲ್ಲಿದ್ದ ಅವರ ಮನೆಯಿಂದ ಬಂಧಿಸಿದ್ದಾರೆ. ವಿಚಾರಣೆ ವೇಳೆ, ರಾಯ್ ಅವರು ಅಪರಾಧವನ್ನು ಒಪ್ಪಿಕೊಂಡಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಯಾದವ್ ಭರವಸೆ ನೀಡಿದ್ದಾರೆ. ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Related posts

ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರಗೈದವರ ಬಹುಮಹಡಿ ಕಟ್ಟಡದ ಮೇಲೆ ಬುಲ್ಡೋಜರ್ ಹತ್ತಿಸಿದ ಗೋರಖ್ ಪುರದ ಸಿಂಹ, ಯೋಗಿ ಆದಿತ್ಯನಾಥ್ ಗರ್ಜನೆಗೆ ಅತ್ಯಾಚಾರಿಗಳ ಕಟ್ಟಡಗಳೆಲ್ಲ ಧ್ವಂಸ..!

ಪ್ರಿಯಕರನನ್ನು ಹುಡುಕಿಕೊಂಡು ಭಾರತದಿಂದ ಪಾಕಿಸ್ತಾನಕ್ಕೆ ಹೋದ ಎರಡು ಮಕ್ಕಳ ತಾಯಿ..!ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿ ಜತೆ ಪ್ರೀತಿ,ಮದುವೆ?

ಕಲ್ಲಡ್ಕ: ಒಂದೇ ದಿನ ಹಲವು ಕಡೆ ಅಗ್ನಿ ಅವಘಡ, ಹೊತ್ತಿ ಉರಿದ ಲಾರಿ !