Latest

ಭಾರತದ ಚಿತ್ರರಂಗದ ಪಾಲಿಗೆ ಹೆಮ್ಮೆಯ ಕ್ಷಣ,ಇತಿಹಾಸದಲ್ಲಿ ಇದೇ ಮೊದಲು!!ಬ್ರಿಟಿಷ್ ಸರ್ಕಾರದಿಂದ ‘ಜೀವಮಾನ ಸಾಧನೆ ಅವಾರ್ಡ್’ ಪಡೆದ ಮೆಗಾ ಸ್ಟಾರ್ ಚಿರಂಜೀವಿ!!

308

ನ್ಯೂಸ್‌ ನಾಟೌಟ್:ಇತಿಹಾಸದಲ್ಲಿ ಇದೇ ಮೊದಲೇ ಎಂಬಂತೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ಈಗ ಬ್ರಿಟಿಷ್ ಸರ್ಕಾರದಿಂದ ‘ಜೀವಮಾನ ಸಾಧನೆ ಪ್ರಶಸ್ತಿ’ ಸಿಕ್ಕಿದೆ. ಈ ಗೌರವವನ್ನು ಅವರು ಸ್ವೀಕರಿಸಿದ್ದು,ಮಾರ್ಚ್ 19ರಂದು ಇಂಗ್ಲೆಂಡ್​ನ ಪಾರ್ಲಿಮೆಂಟ್​ನಲ್ಲಿ (England Parliment) ಇದನ್ನು ನೀಡಿ ಗೌರವಿಸಲಾಗಿದೆ.

ಚಿರಂಜೀವಿ ಅವರ ಹೆಸರಲ್ಲಿ ಈ ಮೊದಲೇ ಅನೇಕ ದಾಖಲೆಗಳಿವೆ. ಈ ಮೊದಲು ಪದ್ಮ ವಿಭೂಷಣ ನೀಡಿ ಗೌರವಿಸಲಾಗಿದ್ದು, ಅಲ್ಲದೆ, 24 ಸಾವಿರ ಡ್ಯಾನ್ಸ್ ಸ್ಟೆಪ್ ಮಾಡಿದ ಖ್ಯಾತಿ ಪಡೆದ ಹೆಗ್ಗಳಿಕೆಯೂ ಇವರದ್ದು.ಈ ಮೂಲಕ ಇವರ ಹೆಸರು ಗಿನ್ನೆಸ್ ವರ್ಲ್ಡ​ ರೆಕಾರ್ಡ್ ಬುಕ್​ಗೆ ಸೇರ್ಪಡೆ ಆಯಿತು. ಎಎನ್​ಆರ್ ನ್ಯಾಷನಲ್ ಅವಾರ್ಡ್​ ಕೂಡ ಅವರಿಗೆ ಸಿಕ್ಕಿದೆ.

ಸದ್ಯ ಜೀವಮಾನ ಸಾಧನೆ ಪ್ರಶಸ್ತಿ ಗೆ  ಚಿರಂಜೀವಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ.ಚಿತ್ರರಂಗಕ್ಕೆ ಚಿರಂಜೀವಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇದರ ಜೊತೆಗೆ ಅವರ ಕಡೆಯಿಂದ ಅನೇಕ ಸಾಮಾಜಿಕ ಕೆಲಸಗಳು ಕೂಡ ಆಗುತ್ತಿವೆ. ಇದೆಲ್ಲವನ್ನೂ ಗಮನಿಸಿದ ಬ್ರಿಟಿಷ್ ಸರ್ಕಾರ ಅವರಿಗೆ ಜೀವಮಾನ ಸಾಧನೆ ಅವಾರ್ಡ್ ನೀಡಿದೆ.ಇದು ಭಾರತದ ಚಿತ್ರರಂಗದ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.

ಚಿರಂಜೀವಿ ಅವರು ಲಂಡನ್​ನಲ್ಲಿ ಇದ್ದು, ಅಲ್ಲಿನ ಸಂಸತ್ತಿನಲ್ಲಿ ಈ ಗೌರವವನ್ನು ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು, ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದು, ಈ ರೀತಿ ಅವಾರ್ಡ್ ಪಡೆದ ಮೊದಲ ಭಾರತೀಯ ಎಂಬ ಹೆಮ್ಮೆಗೆ ಅವರು ಪಾತ್ರರಾಗಿದ್ದಾರೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿರೋ ಅವರ ಸಹೋದರ ಪವನ್ ಕಲ್ಯಾಣ್ ಅವರು, ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಅದೇ ರೀತಿ ಇನ್ನೂ ಅನೇಕರು ಅಭಿನಂದನೆ ತಿಳಿಸಿ ಪೋಸ್ಟ್ ಮಾಡಿದ್ದಾರೆ.

See also  ಏ.1ರಿಂದ ಕರ್ನಾಟಕದಲ್ಲಿ ಟೋಲ್‌ ದರ ಶೇ.5ರಷ್ಟು ಏರಿಕೆ..! ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ದರ ಪರಿಷ್ಕರಣೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget