Latestಕ್ರೈಂಬೆಂಗಳೂರುವೈರಲ್ ನ್ಯೂಸ್

ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಐಡಿ ಅಧಿಕಾರಿಗಳು ಭೇಟಿ, ತನಿಖೆ..! RCB ಯ ಉಚಿತ ಟಿಕೆಟ್ ಜಾಹೀರಾತು ನೋಡಿ ಬಂದಿದ್ದೆ ಎಂದ ಗಾಯಾಳು..!

387

ನ್ಯೂಸ್ ನಾಟೌಟ್: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈಗಾಗಲೇ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಸಿಐಡಿ ತನಿಖೆಗೂ ವಹಿಸಲಾಗಿದೆ. ಸಿಐಡಿ ವಿಶೇಷ ವಿಚಾರಣಾ ದಳದ ಎಸ್ ​ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ, ಕಾಲ್ತುಳಿತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಗೇಟ್ ನಂಬರ್ 7, 19, 18, 16 ಮತ್ತು 21 ರ ಬಳಿ ಹೆಚ್ಚು ಅನಾಹುತ ಆಗಿತ್ತು. ಅಲ್ಲಿಗೆ ಭೇಟಿ ನೀಡಿದ ಸಿಐಡಿ ತಂಡ ಪರಿಶೀಲನೆ ನಡೆಸಿದೆ.

ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಸಿಐಡಿ ಅರ್ಜಿ ಸಲ್ಲಿಸಲಿದೆ. ಇಂದು ಸರ್ಕಾರಿ ರಜೆ, ನಾಳೆ ಭಾನುವಾರವಾಗಿರುವುದರಿಂದ, ಸೋಮವಾರ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ತಂಡ ಸಿದ್ಧತೆ ನಡೆಸಿದೆ.

ಈಗಾಗಲೇ ದುರಂತ ಸಂಬಂಧ RCB, KSCA, DNA ಕಂಪನಿ ವಿರುದ್ಧ 2 FIR ದಾಖಲಾಗಿದ್ದವು. ಇದೀಗ ಕಾಲ್ತುಳಿತದಲ್ಲಿ ಗಾಯಗೊಂಡ ಬಿ.ಕಾಂ ವಿದ್ಯಾರ್ಥಿ ವೇಣು ದೂರು ಆಧರಿಸಿ ಮತ್ತೊಂದು FIR ದಾಖಲಾಗಿದೆ. RCB ಜಾಹೀರಾತು ನೋಡಿ, ಉಚಿತ ಟಿಕೆಟ್ ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದಿದ್ದೆ, ಕ್ರೀಡಾಂಗಣದ ಗೇಟ್ ನಂ.6 ರ ಬಳಿ ನೂಕುನುಗ್ಗಲು ಉಂಟಾಗಿತ್ತು, ಈ ವೇಳೆ ಬಲಗಾಲ ಮೇಲೆ ಬ್ಯಾರಿಕೇಡ್ ಬಿದ್ದಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ವೇಣು ಉಲ್ಲೇಖ ಮಾಡಿದ್ದಾರೆ.

ಕುಡಿದ ಮತ್ತಿನಲ್ಲಿ ತನ್ನ ಪತ್ನಿಯೆಂದು ಪಕ್ಕದ ಮನೆಯಾಕೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ..! ಹಿಡಿದು ಥಳಿಸಿದ ಸ್ಥಳೀಯರು..!

ಮಂಗಳೂರು: ಸೆಮಿನಾರ್​ ತಪ್ಪಿಸಲು ಕಾಲೇಜು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ​ ವಿದ್ಯಾರ್ಥಿನಿ..! ಬಳಿಕ ಆಕೆಯೇ ದೂರು ನೀಡಿದ್ದಳು..!

See also  ತನ್ನ ಕಿಡ್ನಿ ಮಾರಲು ಹೋದ ಅಕೌಂಟೆಂಟ್..! ಇಲ್ಲಿದೆ ಆನ್ ಲೈನ್ ಮೋಸದ ಜಾಲದ ರೋಚಕ ಸ್ಟೋರಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget