Latestಕ್ರೈಂರಾಜಕೀಯರಾಜ್ಯ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್​ ಬೆನ್ನಲ್ಲೇ ಸರ್ಕಾರದಿಂದ ಹೊಸ ನಿಯಮ ಜಾರಿ..! ಕಾರ್ಯಕ್ರಮ ಆಯೋಜಕರು ಕಾನೂನು ಮೀರಿದ್ರೆ 3 ವರ್ಷ ಜೈಲು..!

572

ನ್ಯೂಸ್ ನಾಟೌಟ್: ಆರ್‌ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಬಲಿಯಾಗಿರೋ ಘಟನೆ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಘಟನೆ ಬೆನ್ನಲ್ಲೇ ಹೊಸದಾಗಿ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ಕ್ರೌಂಡ್ ಕಂಟ್ರೋಲ್‌ ಬಿಲ್ -2025 ತರಲು ಸರ್ಕಾರ ಮುಂದಾಗಿದೆ. ಈ ಕಾನೂನು ಮೀರಿದ್ರೆ ಮೂರು ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಈ ಕಾಯ್ದೆ ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಹಾಗೂ ಧಾರ್ಮಿಕ ಉತ್ಸವಗಳಿಗೆ ಅನ್ವಯ ಆಗೋದಿಲ್ಲ. ಆಯೋಜಕರು ಕಾರ್ಯಕ್ರಮಕ್ಕೂ ಮುನ್ನ ಅಥವಾ ಕಾರ್ಯಕ್ರಮ ನಡೆಯುವಾಗ ಜನರನ್ನ ನಿಯಂತ್ರಿಸಲಾಗದಿದ್ದರೆ ಜೈಲು ಶಿಕ್ಷೆ ವಿಧಿಸಲಾಗುವುದು. ಹೀಗಾಗಿ ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮತಿಗೆ ಅರ್ಜಿ ಹಾಕಬೇಕು. ರಾಜಕೀಯ ರೋಡ್ ಶೋ, ಜಾತ್ರೆ, ವಾಣಿಜ್ಯ ಕಾರ್ಯಕ್ರಮಗಳು, ಕಾನ್ಫರೆನ್ಸ್​ಗಳಲ್ಲಿ ಜನರ ನಿಯಂತ್ರಣಕ್ಕೆ ವಿಧೇಯಕ ಜಾರಿ ಮಾಡಲಾಗುವುದು.

ಕಾರ್ಯಕ್ರಮ ನಡೆಸುವ ಮೊದಲು ಪೊಲೀಸ್ ಠಾಣೆಯ ಪೂರ್ವಾನುಮತಿ ಪಡೆಯದ ವ್ಯಕ್ತಿಗಳಿಗೂ ಶಿಕ್ಷೆ ವಿಧಿಸಲಾಗುವುದು. ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ, ಸಾವು ನೋವಿಗೆ ಕಾರ್ಯಕ್ರಮ ಯೋಜಕರದ್ದೇ ಜವಾಬ್ದಾರಿ ಎಂದು ಉಲ್ಲೇಖ ಮಾಡಲಾಗಿದೆ. ಗಾಯಾಳುಗಳಿಗೆ, ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲಿ ಮಾಡಲಾಗುವುದು. ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ, ಗಲಾಟೆ, ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರ ನೀಡಲಾಗಿದೆ. ಅನುಮತಿ ಇದ್ದರೂ ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರ ನೀಡಲಾಗಿದೆ.

ಇರಾನ್ ಪರ ನಿಂತ ಉತ್ತರ ಕೊರಿಯಾ..! ಯುದ್ಧದ ನಡುವೆ ಅಚ್ಚರಿಯ ಬೆಳವಣಿಗೆ..!

See also  ಸರ್ಕಾರವನ್ನು ಎದುರಿಸಲು ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ!-ಬಿಜೆಪಿಗೆ ಕಾಂಗ್ರೆಸ್ ಸವಾಲು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget