ನ್ಯೂಸ್ ನಾಟೌಟ್: ವೈದ್ಯರೊಬ್ಬರು ವಿಸ್ ಡಂ ಟೀತ್(ಬುದ್ಧಿ ಹಲ್ಲು) ಕೀಳುವ ಬದಲು ಬೇರೆ ಆರೋಗ್ಯಕರವಾಗಿದ್ದ ಹಲ್ಲು ಕಿತ್ತಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.
ಅನ್ಹುಯಿ ಪ್ರಾಂತ್ಯದ ಮುನ್ಸಿಪಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಕೆಗೆ ಬುದ್ಧಿ ಹಲ್ಲು ಬರುತ್ತಿದ್ದ ಕಾರಣ ತುಂಬಾ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅದನ್ನು ಕೀಳಿಸಲು ಆಸ್ಪತ್ರೆಗೆ ಬಂದಿದ್ದಳು ಎನ್ನಲಾಗಿದೆ. ಆದರೆ ವೈದ್ಯರು ತಪ್ಪಗಿ ಅರ್ಥೈಸಿಕೊಂಡು ಆರೋಗ್ಯಕರ ಹಲ್ಲು ತೆಗೆದಿದ್ದರು.
ಬಳಿಕ ತಪ್ಪನ್ನು ಅರಿತ ವೈದ್ಯರು ತಂತಿಹಾಕಿ ಆ ಹಲ್ಲನ್ನು ಅದೇ ಜಾಗದಲ್ಲಿ ಕೂರಿಸಿದ್ದರು. ಇದರಿಂದಾಗಿ ಆಕೆಗೆ ಅಪಾರ ನೋವು ಕಾಣಿಸಿಕೊಂಡಿತ್ತು. ಯಾವುದೇ ಇಂಜೆಕ್ಷನ್ ನೀಡದೆ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎನ್ನಲಾಗಿದೆ.
ಆ ಹಲ್ಲನ್ನು ಮತ್ತೆ ಅಲ್ಲಿ ಫಿಕ್ಸ್ ಮಾಡಲು ಪ್ರಯತ್ನಿಸಿದ್ದರಿಂದ ಒಸಡಿನಲ್ಲಿ ಊತ ಕಾಣಿಸಿಕೊಂಡಿತ್ತು. ದಿನಗಟ್ಟಲೆ ಕೇವಲ ನೀರು ಹೊರತುಪಡಿಸಿ ಏನನ್ನೂ ತಿನ್ನಲು ಸಾಧ್ಯವಾಗಿರಲಿಲ್ಲ. ನಿದ್ರೆಯನ್ನು ಕೂಡ ಹಾಳು ಮಾಡಿತ್ತು. ಇದಕ್ಕೆ ಪರಿಹಾರ ಕೊಡಿ ನೋವು ಕಡಿಮೆ ಮಾಡಿ ಎಂದು ಕೇಳಿಕೊಂಡರೂ ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಆಕೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಳು.
ಈ ಸಮಸ್ಯೆಯ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದ್ದರೂ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಆಕೆಯ ಸಹೋದರ ಹೇಳಿದ್ದಾನೆ. ಕ್ರಮೇಣ ಆಕೆಯ ಮಾನಸಿಕ ಸ್ಥಿತಿ ಹದಗೆಟ್ಟಿತು ಬಳಿಕ ಸಾಯುವ ನಿರ್ಧಾರ ಮಾಡಿದ್ದಾಳೆ ಎಂದು ಸಂಬಂಧಿಕರು ಹೇಳಿದ್ದಾರೆ. “ವೂ” ಎಂಬಾಕೆ ಮಾರ್ಚ್ 17 ರಂದು ಆಸ್ಪತ್ರೆಗೆ ಮರಳಿದರು. ಕೆಲವು ಗಂಟೆಗಳ ನಂತರ, ಅವರು ಕಟ್ಟಡದ 11 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದಾರೆ ಎನ್ನಲಾಗಿದೆ. ಆಸ್ಪತ್ರೆಯು ವೈದ್ಯರನ್ನು ಅಮಾನತ್ತುಗೊಳಿಸಿದೆ.
View this post on Instagram