ನ್ಯೂಸ್ ನಾಟೌಟ್: ಕಾಲಿನ ಶಸ್ತ್ರಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಏಳು ವರ್ಷದ ಬಾಲಕಿ ಭಾನುವಾರ ಮೃತಪಟ್ಟ ಘಟನೆ ವರದಿಯಾಗಿದೆ.
ಮಳವಳ್ಳಿ ತಾಲ್ಲೂಕು ನೆಲ್ಲೂರು ಗ್ರಾಮದ ರೈತ ನಿಂಗರಾಜು- ರಂಜಿತಾ ದಂಪತಿ ಪುತ್ರಿ ಸಾನ್ವಿ(7) ಮೃತ ಬಾಲಕಿ.
ಪಾದದ ಮೇಲೆ ಟೈಲ್ಸ್ ಬಿದ್ದು ಮೂಳೆ ಮುರಿತಕ್ಕೆ ಒಳಗಾಗಿದ್ದ ಬಾಲಕಿ ಸಾನ್ವಿಯನ್ನು ಮೇ 29ರಂದು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆ ಬಳಿಕ ಬಾಲಕಿ ವಾಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಚುಚ್ಚುಮದ್ದು ನೀಡಲಾಗಿದೆ. ಮೇ 31ರಂದು ರಾತ್ರಿ ಬಾಲಕಿ ಮೃತಪಟ್ಟಿದ್ದಾಳೆ.
ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಇದೇ ದಂಪತಿಯ ಮತ್ತೊಂದು ಹೆಣ್ಣು ಮಗು ಆರು ತಿಂಗಳ ಹಿಂದೆ ಹೆರಿಗೆಯಾದ ಒಂದು ದಿನದಲ್ಲೇ ಮೃತಪಟ್ಟಿತ್ತು. ಇದೀಗ ದಂಪತಿಯ ಇಬ್ಬರೂ ಮಕ್ಕಳು ಅಸುನೀಗಿವೆ.