ಕ್ರೈಂಬೆಂಗಳೂರುರಾಜ್ಯಸಿನಿಮಾ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆಪ್ತ ಹಾಸ್ಯ ನಟ ಚಿಕ್ಕಣ್ಣಗೂ ಪೊಲೀಸ್ ತನಿಖೆಯ ತೂಗುಗತ್ತಿ, ಚಿಕ್ಕಣ್ಣನಿಗೆ ದೊಡ್ಡಣ್ಣನ ನೋಟಿಸ್ ಏಕೆ..?

239

ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಹಾಸ್ಯನಟ ಚಿಕ್ಕಣ್ಣನಿಗೂ ತನಿಖೆ ಉರುಳು ಬಿದ್ದಿದೆ. (Chikkanna issue with Darshan case)

ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಸಹಜವಾಗಿಯೇ ಚರ್ಚೆಯನ್ನು ಹುಟ್ಟು ಹಾಕಿದೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ಹೆಸರುಗಳು ಕೂಡ ಕೇಳಿ ಬಂದಿದೆ. ವಿಶೇಷ ಎಂದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸ್ಯನಟ ಚಿಕ್ಕಣ್ಣಗೆ ನೋಟಿಸ್ ನೀಡಲು ಪೊಲೀಸರು ಸಿದ್ಧವಾಗಿದ್ದಾರೆ. ಅಷ್ಟಕ್ಕೂ ಅವರಿಗೆ ನೋಟಿಸ್ ನೀಡುವುದಕ್ಕೆ ಕಾರಣ ಏನು..? ಎನ್ನುವುದರ ಬಗ್ಗೆ ಉತ್ತರ ಇಲ್ಲಿದೆ. ನಟ ದರ್ಶನ್ ಶೆಡ್ ಗೆ ತೆರಳುವ ಮೊದಲು ಖಾಸಗಿ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ, ಸಿನಿಮಾದ ನಿರ್ಮಾಪಕರೊಬ್ಬರು ಭಾಗಿಯಾಗಿದ್ದರು.

ಪಾರ್ಟಿ ಮುಗಿಸಿದ ಬಳಿಕ ದರ್ಶನ್ ಮನೆಗೆ ಹೋಗಬೇಕಿತ್ತು. ಆದರೆ ಆತ ಪಟ್ಟಣ ಗೆರೆ ಶೆಡ್ ಗೆ ತೆರಳಿ ಅಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಚಿಕ್ಕಣ್ಣಗೆ ಇಂದು ಸಂಜೆ (ಜೂನ್ 17)) ನೋಟಿಸ್ ನೀಡುವುದಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರು ಅಂತಿಮ ತಯಾರಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಹಾಗೂ ಚಿಕ್ಕಣ್ಣ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ‘ಉಪಾಧ್ಯಕ್ಷ’ ಸಿನಿಮಾ ರಿಲೀಸ್ ಆದಾಗ ದರ್ಶನ್ ಅವರು ಸಿನಿಮಾ ನೋಡಿ ಚಿಕ್ಕಣ್ಣಗೆ ಬೆಂಬಲ ನೀಡಿದ್ದರು. ದರ್ಶನ್ ಅವರ ಅನೇಕ ಪಾರ್ಟಿಗಳಲ್ಲಿ ಚಿಕ್ಕಣ್ಣ ಭಾಗಿ ಆಗಿದ್ದಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಜಾಮೀನು ಮೇಲೆ ಬಿಡುಗಡೆ ಆಗುವುದು ಸದ್ಯಕ್ಕಂತೂ ದೂರದ ಮಾತು. ಕನಿಷ್ಟ ಎಂದರೂ ಆರೇಳು ತಿಂಗಳು ದರ್ಶನ್ ಗೆ ಈ ಕೇಸ್ ನಿಂದ ಹೊರಗೆ ಬರುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಎಲ್ಲ ಸಾಕ್ಷಿಗಳು ಸಿಕ್ಕಿರುವುದರಿಂದ ದರ್ಶನ್ ಈ ಪ್ರಕರಣದ ಪ್ರಮುಖ ಆರೋಪಿ ಅನ್ನುವುದು ಈಗಾಗಲೇ ಖಚಿತಗೊಂಡಿದೆ.

Click 👇

https://newsnotout.com/2024/06/venkateshwara-temple-tirupati-crowd-by-leaves
https://newsnotout.com/2024/06/darshan-fans-issue-electric-device-kannada-news
https://newsnotout.com/2024/06/uppendra-real-star-kannada-news-darshan-video
See also  ಕುಂಭಮೇಳದಲ್ಲಿ ಸನ್ಯಾಸಿ ವೇಷ ತೊಟ್ಟು ತಲೆ ಮರೆಸಿಕೊಂಡಿದ್ದ ಆರೋಪಿ..! ಆತನನ್ನು ಹಿಡಿಯಲು ಸನ್ಯಾಸಿಗಳಾದ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget