ನ್ಯೂಸ್ ನಾಟೌಟ್ : ಪ್ರಿಯತಮೆಯ ಜೊತೆ ಸೇರಿಕೊಂಡು ಕೈ ಹಿಡಿದ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದ ಪತ್ನಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಗುಟ್ಟು ಬಯಲಾಗುತ್ತೆ ಎಂದು ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮೀನಾಕ್ಷಿಯನ್ನು ಕೊನೆಗೂ ಅರೆಸ್ಟ್ ಮಾಡಲಾಗಿದೆ. ಆ ಮೂಲಕ ಕಡೂರು ಪೊಲೀಸರ ನಿರಂತರ ತನಿಖೆಯಿಂದ ಎರಡು ತಿಂಗಳ ಬಳಿಕ ಹತ್ಯೆ ಕಹಾನಿಯ ಅಸಲಿ ಸತ್ಯ ಬಯಲಾಗಿದೆ.
55 ವರ್ಷದ ಮೀನಾಕ್ಷಿ ಮತ್ತು 33 ವರ್ಷದ ಪ್ರದೀಪ್ ಮಧ್ಯೆ ಲವ್ವಿ-ಡವ್ವಿ ನಡೆದಿತ್ತು. ಈ ಅನೈತಿಕ ಸಂಬಂಧದ ಗುಟ್ಟು ಎಲ್ಲಿ ಬಯಲಾಗುತ್ತೆ ಎಂದು ತನ್ನ ಗಂಡನ ಕೊಲೆಗೆ ಪತ್ನಿ ಸ್ಕೆಚ್ ಹಾಕಿದ್ದಳು. ಪ್ರದೀಪ್ ಜೊತೆಗಿನ ಅನೈತಿಕ ಸಂಬಂಧದ ಬಗ್ಗೆ ಇತ್ತ ಸುಬ್ರಹ್ಮಣ್ಯಗೂ ಅನುಮಾನ ಮೂಡಿತ್ತು. ಹೀಗಾಗಿ ಸುಬ್ರಹ್ಮಣ್ಯನನ್ನು ಹತ್ಯೆ ಮಾಡುವಂತೆ ಪ್ರದೀಪ್‌ಗೆ ಮೀನಾಕ್ಷಿ ತಿಳಿಸಿದ್ದಳು. ಅವಳ ಸೂಚನೆ ಮೇರೆಗೆ ಸ್ನೇಹಿತರ ಜೊತೆ ಸೇರಿ ಪ್ರದೀಪ್ ಹತ್ಯೆ ಮಾಡಿದ್ದ.
ಪ್ರಿಯಕರ ಪ್ರದೀಪ್‌ಗೆ ಮಾಹಿತಿ ನೀಡಿ ಹತ್ಯೆ ಮಾಡಿಸಿದ್ದ ಮೀನಾಕ್ಷಿ, ಜೂನ್ 2 ರಂದು ಗಂಡ ನಾಪತ್ತೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರದೀಪ್ ತಾಯಿಯ ಮೊಬೈಲ್ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದಳು. ಪೊಲೀಸರಿಗೆ ಚಿಕ್ಕ ಸುಳಿವು ಸಿಗದಂತೆ ಪ್ರಕರಣದಿಂದ ಮೀನಾಕ್ಷಿ ಬಚಾವ್ ಆಗಿದ್ದಳು. ಆದರೆ ಕಡೂರು ಪೊಲೀಸರ ನಿರಂತರ ತನಿಖೆಯಿಂದ ಜೂನ್ 8 ರಂದು ಆರೋಪಿಗಳಾದ ಪ್ರದೀಪ್, ಸಿದ್ದೇಶ್ ಮತ್ತು ವಿಶ್ವಾಸ್ ಎಂಬಾತನನ್ನು ಬಂಧಿಸಿದ್ದರು. ಮೇ 31ರ ರಾತ್ರಿ ಕಡೂರು ಪಟ್ಟಣದ ಕೋಟೆ ಬಡಾವಣೆಯ ನಿವಾಸಿ ಪತಿ ಸುಬ್ರಹ್ಮಣ್ಯರ ಬರ್ಬರ ಹತ್ಯೆ ನಡೆದಿತ್ತು. ಚಿಕ್ಕಮಗಳೂರಿಗೆ ಕರೆತಂದು ದಾರಿ ಮಧ್ಯೆ ಹತ್ಯೆ ಮಾಡಿ ಪ್ರದೀಪ್ ಸುಟ್ಟು ಹಾಕಿದ್ದ. ಮೃತ ಸುಬ್ರಹ್ಮಣ್ಯ ಟೈಲರ್ ಕೆಲಸ ಮಾಡುತ್ತಿದ್ದರು. ಆತನ ಶಾಪ್ ಕೀ ಯಿಂದ ಹತ್ಯೆ ರಹಸ್ಯ ಸಂಪೂರ್ಣ ಹೊರಬಂದಿತ್ತು.