ನ್ಯೂಸ್ ನಾಟೌಟ್ :ಮೂಡಿಗೆರೆಯ ಹೆಸಲ್ ಗ್ರಾಮದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಎರಡು ದಿನದ ಅಂತರದಲ್ಲಿ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.
ಕೃಷಿ ಇಲಾಖೆ ವಾಹನ ಚಾಲಕ ರವಿ- ಪಲ್ಲವಿ ದಂಪತಿ ಪುತ್ರಿ ಪ್ರೇರಣಾ (11) ಹಾಗೂ ಕೂಲಿ ಕಾರ್ಮಿಕ ಬಸವರಾಜ್-ಮಂಜುಳಾ ದಂಪತಿ ಪುತ್ರಿ ಸಾರ (4) ಮೃತಪಟ್ಟರೆಂದು ಗುರುತಿಸಲಾಗಿದೆ.ಪ್ರೇರಣಾ, ಜ್ವರದಿಂದ ಬಳಲುತ್ತಿದ್ದುದನ್ನು ಗಮನಿಸಿದ ಶಿಕ್ಷಕರು ಪಾಲಕರಿಗೆ ಕರೆ ಮಾಡಿ ತಿಳಿಸಿದ್ದರು.ಬಾಲಕಿಯನ್ನು ತಾಲ್ಲೂಕು ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರ ಸಲಹೆಯಂತೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆ.
ಇನ್ನು ಅಂಗನವಾಡಿಗೆ ಹೋಗುತ್ತಿದ್ದ ಸಾರಗೆ ಶುಕ್ರವಾರ ಬೆಳಿಗ್ಗೆ ಜ್ವರ
ಕಾಣಿಸಿಕೊಂಡಿದೆ. ಪಾಲಕರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಸಿಗದೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು
ಹೋಗಿದ್ದು, ಶನಿವಾರ ಬೆಳಿಗ್ಗೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.