ನ್ಯೂಸ್ ನಾಟೌಟ್: ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದ್ದು, ಕಾಡಾನೆ, ಚಿರತೆ ಸೇರಿದಂತೆ ಇನ್ನಿತರ ಪ್ರಾಣಿಗಳು ಮನುಷ್ಯನ ನಿದ್ದೆಗೆಡಿಸಿವೆ.ಕರ್ನಾಟಕದ ಹಲವು ಭಾಗದ ರೈತರು ಭಾರಿ ತೊಂದರೆಗೊಳಗಾಗಿದ್ದಾರೆ.ಇನ್ನೂ ಕೆಲವರ ಮೇಲೆ ಇವುಗಳು ದಾಳಿ ಮಾಡುತ್ತಿದ್ದು,ಕೆಲವರು ಗಾಯದಿಂದ ಬಳಲಿದ್ದರೆ , ಇನ್ನೂ ಕೆಲವರು ಜೀವವನ್ನೇ ಕಳೆದು ಕೊಂಡಿದ್ದಾರೆ.
ಇದೀಗ ಚಿಕ್ಕಮಗಳೂರಿನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಆನೆ ದಾಳಿಗೆ
ನಾಲ್ವರು ಜೀವ ಕಳೆದುಕೊಂಡಿದ್ದರೂ ಅರಣ್ಯ ಇಲಾಖೆ
ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು
ಸ್ವಯಂಪ್ರೇರಿತವಾಗಿ ಬಾಳೆಹೊನ್ನೂರು ಬಂದ್ ಗೆ ಕರೆ
ನೀಡಿದ್ದಾರೆ.
ಸೋಮವಾರ (ಜು.28) ರಂದು ಸ್ವಯಂಪ್ರೇರಿತವಾಗಿ ಅಂಗಡಿ
ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಅರಣ್ಯ
ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ, ಸ್ಥಳೀಯರು
ನೀಡಿದ ಬಂದ್ ಹಿನ್ನೆಲೆಯಲ್ಲಿ ಬಾಳೆಹೊನ್ನೂರು-ಖಾಂಡ್ಯ
ಪಟ್ಟಣ ಸಂಪೂರ್ಣ ಬಂದ್ ಆಗಿದ್ದು ಜೊತೆಗೆ ಖಾಸಗಿ
ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿತ್ತು ಎನ್ನಲಾಗಿದೆ.