ಕರಾವಳಿಚಿಕ್ಕಮಗಳೂರು

ಚಿನ್ನದಂಗಡಿಗೆಂದು ಬಂದ ಬಾಲಕಿ ಜತೆ ಮಾಲೀಕನ ಅಸಭ್ಯ ವರ್ತನೆ..!ಬಾಲಕಿ ತಾಯಿ ಸೇರಿದಂತೆ ಸಾರ್ವಜನಿಕರಿಂದ ಗೂಸಾ..ವಿಡಿಯೋ ವೈರಲ್

165

ನ್ಯೂಸ್ ನಾಟೌಟ್ : ಚಿನ್ನದಂಗಡಿಗೆಂದು ಬಂದಿದ್ದ ಬಾಲಕಿ ಜತೆಗೆ ಅಸಭ್ಯ ವರ್ತನೆ ತೋರಿದ್ದ ಚಿನ್ನದಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

ತರೀಕೆರೆ ಪಟ್ಟಣದ ಎಂ.ಜಿ.ರಸ್ತೆ ಚಿನ್ನದಂಗಡಿಯ ಮಾಲೀಕ ಅಮೀರ್ ಥಳಿತಕ್ಕೊಳಗಾದ ವ್ಯಕ್ತಿ ಎಂದು ಹೇಳಲಾಗಿದೆ.ಈತ ಅಂಗಡಿಗೆ ಬರುವ ಮಹಿಳೆಯರೊಂದಿಗೂ ಅಸಭ್ಯ ವರ್ತನೆ ತೋರುತ್ತಿದ್ದು,ಇತ್ತೀಚೆಗಷ್ಟೇ ಅಂಗಡಿಗೆ ಬಂದಿದ್ದ ಬಾಲಕಿಯ ಜೊತೆಗೂ ಈತ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗುತ್ತಿದೆ.ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಕಿಯ ತಾಯಿ ಸೇರಿದಂತೆ ಸಾರ್ವಜನಿಕರು ಅಂಗಡಿ ಮಾಲೀಕ ಅಮೀರನನ್ನು ಥಳಿಸಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಬೆಳ್ತಂಗಡಿ: ಮೂರು ವರ್ಷದ ಮಗು ದುರಂತ ಅಂತ್ಯ..! ರಸ್ತೆ ಬದಿಯ ಮನೆಯಿಂದ ಹೊರ ಬಂದ ಮಗು ಮತ್ತೆ ಮನೆ ಸೇರಲೇ ಇಲ್ಲ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget