ಚಿಕ್ಕಮಗಳೂರು

ಕೇವಲ 750ರೂ. ಸಾಲ ಹಿಂದಿರುಗಿಸಲಾಗದೇ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಮಾಜಿ ಯೋಧನ ಮಗ , ಜೀವನವನ್ನೇ ಕತ್ತಲಾಗಿಸಿ ಕೊಂಡ ಘಟನೆಗೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನ್ಯೂಸ್ ನಾಟೌಟ್ : ಇತ್ತೀಚಿಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಖಾಸಗಿ ಶಾಲಾ ವಿದ್ಯಾರ್ಥಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿಕೊಂಡ ಘಟನೆ ವರದಿಯಾಗಿತ್ತು. ಶ್ರೀನಿವಾಸ್ ಎಂಬ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ಬೆಳಗ್ಗಿನ ಜಾವ ತನ್ನ ಕುತ್ತಿಗೆಗೆ ಸೀರೆ ಬಿಗಿದುಕೊಂಡಿದ್ದ. 9ನೇ ತರಗತಿ ವಿದ್ಯಾರ್ಥಿಯ ಈ ಕೃತ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು.

ಇದಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ ಸ್ಪೋಟಕ ವಿಷಯವೊಂದು ಬೆಳಕಿಗೆ ಬಂದಿದೆ. ಕೇವಲ 750 ರೂಪಾಯಿ ಸಾಲ ಹಿಂದಿರುಗಿಸಲು ಸಾಧ್ಯವಾಗದಿದ್ದುದಕ್ಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಕಡೂರು ತಾಲೂಕಿನ ಹಿರೇ ಬಳ್ಳಕೆರೆ ಗ್ರಾಮದ ಶ್ರೀನಿವಾಸ್ ಕೊಪ್ಪ ತಾಲೂಕಿನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿ ಈ ಕೃತ್ಯ ನಡೆಸುವುದಕ್ಕೂ ಮುನ್ನ ಬರೆದಿಟ್ಟಿದ್ದ ಚೀಟಿ ಪರಿಶೀಲಿಸಿದ್ದಾರೆ.

ವಿದ್ಯಾರ್ಥಿ ಸ್ನೇಹಿತರಿಂದ ಪಡೆದಿದ್ದ 750 ರೂ. ಸಾಲವನ್ನು ನೀಡಲು ಸಾಧ್ಯವಾಗದ ಹಿನ್ನೆಲೆ ಮನನೊಂದ್ದಿದ್ದೇನೆ ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಬರೆದಿದ್ದಾನೆ. ಶ್ರೀನಿವಾಸ್ ಮಾಜಿ ಯೋಧನ ಮಗನಾಗಿದ್ದು, ಮಗನನ್ನು ಕಳೆದು ಕೊಂಡ ತಂದೆ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ.

Related posts

ಜೂಜು ಅಡ್ಡೆ ಮೇಲೆ ಪೊಲೀಸರ ದಿಢೀರ್ ದಾಳಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕಿ ಆಪ್ತ!

ನೋಡ ನೋಡುತ್ತಿದ್ದಂತೆ ಮನೆಯೊಳಗೆ ನುಗ್ಗಿದ ಇನ್ನೋವಾ ಕಾರು..!ರಾತ್ರಿ ವೇಳೆ ನಿದ್ರೆಯ ಮಂಪರಿನಲ್ಲಿ ಅಪಘಾತ ಸಂಭವಿಸಿತೇ?

ಚಾರ್ಮಾಡಿ: ಭಾರಿ ಮಳೆಗೆ ರಸ್ತೆಗೆ ಕುಸಿದ ಗುಡ್ಡ, ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತ