ಕ್ರೈಂ

ರಸ್ತೆಯಲ್ಲಿ ರಕ್ತದ ಕಲೆಗಳು! ನಿಗೂಢ ರಕ್ತದ ಕಲೆಗಳು ಹೇಳುತ್ತಿವೆ ರೋಚಕ ಕತೆ!

277

ನ್ಯೂಸ್ ನಾಟೌಟ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಪಟ್ಟಣದ ರಸ್ತೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ದೂರ ರಕ್ತಕಲೆ ದಪ್ಪಗೆ ಕಾಣಿಸಿಕೊಂಡಿದೆ. ದಾರಿ ಉದ್ದಕ್ಕೂ ರಕ್ತದ ಕಲೆಗಳನ್ನು ಕಂಡು ಗ್ರಾಮಾಸ್ಥರಲ್ಲಿ ಆತಂಕ ಉಂಟುಮಾಡಿದೆ.

ರಕ್ತದ ಕಲೆ ಕಾಣದಂತೆ ಸಗಣಿಯನ್ನು ಸಾರಿಸಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಚ್ಚರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಇಬ್ಬರ ಶವ ಎಸೆದಿದ್ದ ಪ್ರಕರಣದಲ್ಲಿ , ಒಂದು ಶವ ಮಾತ್ರ ಪತ್ತೆಯಾಗಿದೆ. ಇನ್ನೊಂದು ಶವವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು, ಆ ಪ್ರಕರಣಕ್ಕೆ ಸಮಬಂಧವಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ರಾತ್ರಿ ಸಮಯ ಈ ಘಟನೆ ನಡೆದಿರುವ ಶಂಕೆಯಿದೆ. ಕೈ ಕೊಟ್ಟಿರುವ ಸಿಸಿ ಕ್ಯಾಮರದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಸ್ಥಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆಎಂದು ವರದಿ ತಿಳಿಸಿದೆ.

See also  ನಿಗೂಢವಾಗಿ ಕಾಣೆಯಾಗಿದ್ದ ಮಹಿಳೆ ಬಾವಿಯೊಳಗೆ ಜೀವಂತವಾಗಿ ಪತ್ತೆ..! 3 ದಿನಗಳ ಬಳಿಕ ಸಿಕ್ಕ ಆಕೆ ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget