ಚಿಕ್ಕಮಗಳೂರು

ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ದಂಡ ಪ್ರಕರಣ,ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹೇಳಿದ್ದೇನು?

ನ್ಯೂಸ್ ನಾಟೌಟ್‌ : ಚಿಕ್ಕಮಗಳೂರು  ಜಿಲ್ಲೆಯ ಕ್ರೈಸ್ತ ಶಾಲೆಯೊಂದರಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಯ (Pran Prathistha ceremony) ದಿನ ಗೈರಾದ್ರೆ 1 ಸಾವಿರ ದಂಡ ಹಾಕಲಾಗುವುದು ಎಂಬ ವಿಚಾರ ಇಂದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಇದಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸಿದ್ದವು. ಈ ಬೆನ್ನಲ್ಲೇ ಇದೀಗ ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ಕೊಟ್ಟಿದ್ದು, ಅಯೋಧ್ಯೆಗೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಇತ್ತ ದಂಡದ ಎಚ್ಚರಿಕೆಯ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ಕೊಟ್ಟಿದ್ದಾರೆ. 3-4 ದಿನ ರಜೆ ಇದ್ದಾಗ ಮಕ್ಕಳನ್ನು ಕರೆದು ಕೇಳುತ್ತೇವೆ. ಯಾಕೆಂದರೆ 3-4 ದಿನ ರಜೆ ಸಿಕ್ಕರೆ ಊರಿಗೆ ಹೋಗ್ತಾರೆ, ಶಾಲೆಗೆ ಬರೋದು ಲೇಟ್ ಆಗುತ್ತೆ. ಕ್ಲಾಸ್ ಮಿಸ್ ಆಗೋದು ಬೇಡ ಎಂಬ ಉದ್ದೇಶದಿಂದ ಮಕ್ಕಳಿಗೆ ಎಚ್ಚರಿಕೆ ನೀಡ್ತೇನೆ. ಈ ಹಿನ್ನೆಲೆಯಲ್ಲಿ ಸೋಮವಾರ ಕೂಡ ಮಕ್ಕಳಿಗೆ ಭಯ ಇರಲಿ ಅಂತ ಎಚ್ಚರಿಕೆ ನೀಡಿದ್ದೇನೆ ಅಷ್ಟೇ ಎಂದರು.

ರಾಮಮಂದಿರಕ್ಕೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಧಾರ್ಮಿಕ ವ್ಯಕ್ತಿ, ಎಲ್ಲರನ್ನೂ ಸಮಾನವಾಗಿ ನೋಡ್ತೀನಿ. ಮಕ್ಕಳು ಶಾಲೆಗೆ ಬರದಿದ್ರೆ ದಂಡ ಹಾಕ್ತೀನಿ ಅಂತ ಹೇಳಿಲ್ಲ. ಪ್ರತಿ ಬಾರಿ ಹೇಳುವ ರೀತಿಯೇ ಹೇಳಿದ್ದೇನೆ ರಾಮಮಂದಿರಕ್ಕಾಗಿ ಹೇಳಿಲ್ಲ. ಸೆಂಟ್ ಜೋಸೆಫ್ ಶಾಲೆಯ ಪ್ರಾಂಶುಪಾಲೆ ಜೀನ್ ಸ್ಪಷ್ಟನೆ ಕೊಟ್ಟಿದ್ದಾರೆ.

ಶಾಲೆಗೆ ರಜೆ ಹಾಕಿದರೇ ಸಾವಿರ ರೂ.ದಂಡ ಹಾಕುವುದಾಗಿ ಚಿಕ್ಕಮಗಳೂರು ನಗರದ ಖಾಸಗಿ ಶಾಲೆಯೊಂದರ ಮಕ್ಕಳಿಗೆ ಆರೋಪ ಮಾಡಿದ್ದು, ಶಾಲೆಯ  ವಿರುದ್ಧ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಆಕ್ರೋಶ ಹೊರ ಹಾಕಿದೆ.ಅಯೋಧ್ಯೆಯಲ್ಲಿ ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಸರ್ಕಾರವೇ ಆದೇಶಿಸಿದೆ. ಜ.22ರಂದು ಶಾಲೆಗಳಿಗೆ ರಜೆ ನೀಡಬೇಕೋ… ಬೇಡವೋ ಎಂಬ ಕುರಿತು ಸರ್ಕಾರ ಕೂಡ ಗೊಂದಲದಲ್ಲಿದೆ‌. ಈ ಮಧ್ಯೆ ಖಾಸಗಿ ಶಾಲೆಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಹಿಂದೂ ಪರ ಸಂಘಟನೆಗಳು ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದ್ರು..

Related posts

ಧಾರಾಕಾರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ..! ಹಲವೆಡೆ ಸೇತುವೆ ಮುಳುಗಡೆ, ಕಳಸ-ಉಡುಪಿ ಸಂಪರ್ಕ ಬಂದ್‌

ಚೈತ್ರಾ ಕುಂದಾಪುರ ಓಡಾಡಿದ ಜಾಗಕ್ಕೆ ತೀರ್ಥ ಹಾಕಿ ಶುದ್ಧೀಕರಿಸಿದ ಜನರು..! ಅಂದು ಚೈತ್ರಾ ವಿರುದ್ಧ ಹರಕೆ ಹೊತ್ತಿದ್ದೇಕೆ ಈ ಗ್ರಾಮಸ್ಥರು? ಚೈತ್ರಾ ಕೇಸ್ ನಲ್ಲಿದೆಯಾ ದೇವರ ಕೈವಾಡ?!

ಪ್ರವಾಸಿಗರೇ,ಮಟನ್‌ ಬಿರಿಯಾನಿ ತಿನ್ನೋ ಮೊದಲು ಎಚ್ಚರ..!ನಾನ್ ವೆಜ್ ಹೋಟೆಲ್‍ನಲ್ಲಿ ಬೀಫ್‌ ಮಿಕ್ಸ್ ಪತ್ತೆ,ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇಗೆ?