Latestಕ್ರೈಂರಾಜ್ಯವೈರಲ್ ನ್ಯೂಸ್

ಚಿಕ್ಕಮಗಳೂರು: ತಂದೆಯಿಂದ 7 ವರ್ಷದ ಮಗಳ ಮೇಲೆ ಅತ್ಯಾಚಾರ..! ಬಾಲಕಿ ಆಪ್ತ ಸಮಾಲೋಚನೆಯ ವೇಳೆ ಹೇಳಿದ್ದೇನು..?

740
Representative image

ನ್ಯೂಸ್ ನಾಟೌಟ್: ಏಳು ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಚಿಕ್ಕಮಗಳೂರಿನ ಹೊಸಹಳ್ಳಿ ಗ್ರಾಮದ ಕೂಲಿ ಲೈನ್ ಎಂಬಲ್ಲಿ ಶುಕ್ರವಾರ(ಮೇ.2) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ನೀಡಿದ ದೂರಿನಂತೆ ಮಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಲೈನ್ ನಿವಾಸಿ ಮೂರ್ತಿ ಅತ್ಯಾಚಾರ ಆರೋಪಿ ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತ ಬಾಲಕಿ ಮೇ 2ರಂದು ಸ್ನಾನ ಮಾಡುತ್ತಿದ್ದ ವೇಳೆ ಆರೋಪಿ ತಂದೆ ಮೂರ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಆರೋಪಿ ನೀರಿನ ಬ್ಯಾರೆಲ್ ತುಂಡೊಂದನ್ನು ಬಾಲಕಿಯ ಗುಪ್ತಾಂಗಕ್ಕೆ ತುರುಕಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ಸಂತ್ರಸ್ತ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ಮಾಡಿದಾಗ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯ ವೇಳೆ ಬಾಲಕಿಯ ತಾಯಿ ಮನೆಯಲ್ಲಿ ಇಲ್ಲವಾಗಿದ್ದು, ತಾಯಿ ಮನೆಗೆ ಆಗಮಿಸಿದ ವೇಳೆ ಬಾಲಕಿ ತಂದೆಯ ದುಷ್ಕೃತ್ಯದ ಬಗ್ಗೆ ಹೇಳಿದ್ದಾಳೆ. ಈ ವೇಳೆ ಮಗಳ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ ಎಂದು ಪೊಲೀಸ್ ದೂರಿನಲ್ಲಿ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ತಿಳಿಸಿದ್ದಾರೆ.

ಬಾಲಕಿಯ ಗುಪ್ತಾಂಗದಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದುದನು ಗಮನಿಸಿದ ಆರೋಪಿ ಮೂರ್ತಿಯು ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಬಾರದು. ಬದಲಾಗಿ ವಿವಸ್ತ್ರಳಾಗಿ ಸ್ನಾನ ಮಾಡುತ್ತಿದ್ದ ಕಾರಣಕ್ಕೆ ತಂದೆ ಕಾಲಿನಿಂದ ಗುಪ್ತಾಂಗಕ್ಕೆ ಒದ್ದ ಪರಿಣಾಮ ರಕ್ತಸ್ರಾವವಾಗಿದೆ ಎಂದು ಹೇಳುವಂತೆ ಬೆದರಿಸಿದ್ದಾನೆ ಎಂದು ಬಾಲಕಿಯ ಹೇಳಿಕೆಯನ್ನು ಆಧರಿಸಿ ದೂರಿನಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ತಪಾಸಣೆ ವೇಳೆಯೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೇ ಆರೋಪಿ ಮೂರ್ತಿ ಈ ಹಿಂದೆಯೂ 2-3 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ಆಪ್ತ ಸಮಾಲೋಚನೆ ವೇಳೆ ತಿಳಿಸಿದ್ದಾಗಿ ಪೊಲೀಸ್ ದೂರಿನಲ್ಲಿ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಉಲ್ಲೇಖಿಸಿದ್ದಾರೆ. ಆರೋಪಿ ಮೂರ್ತಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಉಡುಪಿಗೆ ಬಂದ ಭೂಗತ ಪಾತಕಿ ಬನ್ನಂಜೆ ರಾಜಾ..! 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವಾತನಿಗೆ 12 ದಿನ ಪೆರೋಲ್ ರಜೆ..!

ತಾನು ಅಕ್ರಮ ಸಂಬಂಧ ಹೊಂದಿದ್ದವನೊಂದಿಗೆ ಬಲವಂತವಾಗಿ ಮಗಳನ್ನು ಮದುವೆ ಮಾಡಿಸಿದ ತಾಯಿ..! ಯುವತಿ ನೇಣಿಗೆ ಶರಣು..!

See also  22ರ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತೆ..! ಉಳಿದುಕೊಳ್ಳಲು ಮನೆ ಕೊಟ್ಟವಳಿಗೆ ಸಾವಿನ ಮನೆ ತೋರಿದ ಪ್ರೇಮಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget