ಕರಾವಳಿಕೊಡಗು

ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ‌-ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ- ವಿಶೇಷ ಪೂಜೆ ಸಲ್ಲಿಕೆ

245

ನ್ಯೂಸ್ ನಾಟೌಟ್ :ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ‌-ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿದರು. ಈ ವೇಳೆ ಸ್ಥಳೀಯರು ದೇವಸ್ಥಾನದ ಹೊಳೆ ಬದಿಯ ತಡೆಗೂಡೆಯ ನಿರ್ಮಾಣಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಬಿ.ಸದಾಶಿವ,ಮಡಿಕೇರಿ ತಹಶೀಲ್ದಾರ್ ಕಿರಣ್ ಗೌರಯ್ಯ , ಸಂಪಾಜೆ ಹೋಬಳಿ ಉಪ ತಹಶೀಲ್ದಾರ್ ಹೆಚ್ .ಹೆಚ್ ವೆಂಕಟಾಚಲ, , ನಿವೃತ್ತ ಕಂದಾಯ ಪರೀಕ್ಷಕ ಪ್ರಭಾರ, ಉಪತಹಶೀಲಾರ್ ಎಂ. ಏ ಸದಾನಂದ , ಎಂ.ಸಿ ಮನೋಹರ ಜಿಲ್ಲಾ ಕಾಂಗ್ರೆಸ್ ಸದಸ್ಯ , ಸಂಪಾಜೆ ಕಂದಾಯ ಪರಿವೀಕ್ಷಕರು ಬಿ. ಜಿ ವೆಂಕಟೇಶ್, ಯತೀಶ್ ಉಳ್ಳಾಲ ಹಿರಿಯ ಸಹಾಯ ಉಪಯುಕ್ತರು ಉಪವಿಭಾಗ ಮಡಿಕೇರಿ ಯತೀಶ್ ಉಳ್ಳಾಲ , ಶೋಭಾ ರಾಣಿ, ಸಂಪಾಜೆ ಗ್ರಾ.ಪಂ.ಅಧ್ಯಕ್ಷರು ನಿರ್ಮಲಾ ಭಾರತ್, ಉಪಾಧ್ಯಕ್ಷರು ಜಗದೀಶ್ ಪರಮಲೆ, ಕಾರ್ಯದರ್ಶಿ ನವೀನ್ ಕುಮಾರ್ ಬಿ.ಎಂ, ಸೀತಾರಾಂ ಕೆ. ಮಾಜಿ ಅಧ್ಯಕ್ಷರು ಯುವ ಕಾಂಗ್ರೆಸ್ ಕೊಡಗು ಹನೀಫ್ ಎಸ್ . ಪಿ, ಕೊಡಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಯಿದಿನ್ ಕುಂಜಿ, ನಾಪೋಕ್ಲು ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರಾಜೇಶ್ವರಿ, ಕರಿಕೆ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎನ್ ಬಾಲಚಂದ್ರ ನಾಯರ್ ,ಜಯ ಚೆದ್ಕಾರ್ , ಗ್ರಾಮಸ್ಥರು ,ಮೊದಲಾದವರು ಉಪಸ್ಥಿತರಿದ್ದರು.

ನಂತರ ಕೊಡಗು-ಸಂಪಾಜೆ ಗ್ರಾಮ ಪಂಚಾಯತ್‌ನ ಮಂಗಳಪಾರೆಯ ಕೂವೆಕ್ಕಾಡು ನೀರಿನ ಸರಬರಾಜು ಟ್ಯಾಂಕ್ ಉದ್ಘಾಟನೆಯನ್ನು ಮುಖ್ಯ ಮಂತ್ರಿಯ ಕಾನೂನು ಸಲಹೆಗಾರ, ವಿರಾಜಪೇಟೆ ವಿಧಾನಸಭಾ ಶಾಸಕ ಎ.ಎಸ್. ಪೊನ್ನಣ್ಣ ನೇರವೇರಿಸಿದರು.ಬಳಿಕ ಶಾಸಕರು ಮನೆಗಳಿಗೆ ನೀರು ಸರಿಯಾಗಿ ಬರುತ್ತಿದೆಯೇ ಎಂದು ಪರಿಶೀಲಿಸಿದರು.ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು.

See also  ಸೌಜನ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ನಿಂತಿಕಲ್ಲಿನಿಂದ ವಾಹನ ಜಾಥಾ ಆರಂಭ..ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget